ಹಿಂದೂ ಜನಜಾಗೃತಿ ಸಮಿತಿ ಸಂಸ್ಕಾರ ಪುಸ್ತಕ ವಿತರಣೆ

udp-4-book
Published on

ಉಡುಪಿ : ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಬುಧವಾರ ಸರಸ್ವತಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಪ್ಪತೈದು ವಿದ್ಯಾರ್ಥಿಗಳಿಗೆ ಉಚಿತ ಸಂಸ್ಕಾರ ನೋಟ್​ ಪುಸ್ತಕಗಳನ್ನು ವಿತರಣೆ ಮಾಡಲಾಯಿತು.

ಶಾಲೆಯ ಮುಖ್ಯೋಪಾಧ್ಯಾಯಿನಿ ಶಾಂತಿಲತಾ ಮಾತನಾಡಿ, ಸಂಸ್ಕಾರ ನೋಟ್​ ಪುಸ್ತಕದಲ್ಲಿ ಸ್ವಾತಂತ್ರಕ್ಕಾಗಿ ಹೋರಾಡಿದ ರಾಷ್ಟ್ರ ಪುರುಷರು, ಪ್ರಜೆಗಳ ಹಿತಕ್ಕಾಗಿಯೇ ದುಡಿದ ರಾಜ ಮಹಾರಾಜರ ಆದರ್ಶ, ಒಳಗಿನ ಪುಟದಲ್ಲಿ ಸುಸಂಸ್ಕಾರ, ನೈತಿಕತೆಯ ಬಗ್ಗೆ ವಿಷಯ ಒಳಗೊಂಡಿರುತ್ತದೆ. ಅದನ್ನು ಓದಿ ತಿಳಿದುಕೊಂಡು ಜೀವನದಲ್ಲಿ ಆಳವಡಿಸಿಕೊಂಡರೆ ಮಕ್ಕಳು ಆದರ್ಶ ವಿದ್ಯಾರ್ಥಿಯಾಗಿ ರೂಪುಗೊಳ್ಳುವುದರಲ್ಲಿ ಸಂದೇಹವಿಲ್ಲ, ಇದರಿಂದ ಆದರ್ಶ ರಾಷ್ಟ್ರ ಕಟ್ಟಲು ಸಾಧ್ಯವಾಗುವುದು ಎಂದರು. ಈ ಸಂದರ್ಭದಲ್ಲಿ ಸಮಿತಿ ಕಾರ್ಯಕರ್ತರಾದ ರತ್ನಾ ಮೂಲ್ಯ, ಗೀತಾ ಆಚಾರ್ಯ ಹಾಗೂ ಪ್ರಜ್ಞಾ ರಾವ್​ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net