ಹಿಂದು ಕಾರ್ಯಕರ್ತನ ಮೇಲೆ ರೌಡಿ ಶೀಟ್​ಗೆ ಕಿಡಿ

0601klb13
Published on

ಕಲಬುರಗಿ: ಜಿಲ್ಲೆಯಲ್ಲಿ ಹಲವು ವರ್ಷದಿಂದ ಹಿಂದುತ್ವದ ಪರ ಹೋರಾಟಗಾರರಾಗಿರುವ ಲಕ್ಷ್ಮೀಕಾಂತ ಸ್ವಾದಿ ಅವರ ವಿರುದ್ಧ ಸಕಾರಣವಿಲ್ಲದೆ ರೌಡಿ ಶೀಟ್ ಪ್ರಕರಣ ದಾಖಲಿಸಿ, ಹೋರಾಟಗಾರರ ಧ್ವನಿ ಅಡಗಿಸುವ ಕೆಲಸ ಮಾಡಲಾಗುತ್ತಿದೆ. ಕೂಡಲೇ ಸ್ವಾದಿ ವಿರುದ್ಧದ ರೌಡಿ ಶೀಟ್ ರದ್ದು ಪಡಿಸಬೇಕು ಎಂದು ಆಗ್ರಹಿಸಿ ನಗರದಲ್ಲಿ ಹಿಂದು ಜಾಗೃತಿ ಸೇನೆಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.

ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಶನಿವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಕಾಂಗ್ರೆಸ್ ಸರ್ಕಾರ ರೌಡಿ ಶೀಟ್ ಹಾಕಿ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ಯಾವುದೇ ಧರ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿಲ್ಲ. ಒಂದೇ ಪ್ರಕರಣ ದಾಖಲಾಗಿದೆ. ವಿನಾಕಾರಣ ರೌಡಿ ಶೀಟ್ ಹಾಕಿ ಪೊಲೀಸರು ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಘವೇಂದ್ರ ಪೊಲೀಸ್ ಠಾಣೆಯವರು ಮಾನಸಿಕವಾಗಿ ಒತ್ತಡ ಹೇರಿ, ಷಡ್ಯಂತ್ರ ಹೂಡಿ ಸಂಬAಧವಿಲ್ಲದ ಪ್ರಕರಣದಲ್ಲಿ ಸ್ವಾದಿ ಅವರನ್ನು ಸಿಕ್ಕಿ ಹಾಕಿಸಿ, ಪೊಲೀಸರು ರೌಡಿ ಶೀಟ್ ಮಾಡಿ, ಹಿಂದು ಹೋರಾಟಗಾರನ ಧ್ವನಿ ಅಡಗಿಸುವ ಕೆಲಸ ಮಾಡಿದ್ದಾರೆ ಎಂದು ಕಿಡಿ ಕಾರಿದರು.

ಕೂಡಲೇ ಈ ಪ್ರಕರಣದಲ್ಲಿ ನಿಯಮ ಉಲ್ಲಂಘಿಸಿ, ಅಧಿಕಾರ ದುರುಪಯೋಗ ಪಡೆಸಿಕೊಂಡ ರಾಘವೇಂದ್ರ ನಗರ ಪೊಲೀಸ್ ಠಾಣೆ ಸಿಪಿಐ ಹಾಗೂ ಪೇದೆ ಮಲ್ಲಣ್ಣಗೌಡ ಅವರನ್ನು ವಜಾಗೊಳಿಸಬೇಕು, ಸ್ವಾದಿ ಅವರನ್ನು ರೌಡಿ ಶೀಟ್‌ನಿಂದ ಮುಕ್ತಿ ನೀಡಬೇಕು ಎಂದು ಆಗ್ರಹಿಸಿ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.

ಸೇನೆಯ ಶಶಿಕಾಂತ ದೀಕ್ಷಿತ, ಸಿದ್ದು ಕಂದಗಲ, ಸಂತೋಷ ಸೋನಾವಣೆ, ದಶರಥ ಇಂಗೋಳೆ, ಹಣಮಂತ, ಸುನೀಲ ರಾಠೋಡ, ಮಹಾದೇವ ಕೋಟನೂರ, ಚಿದಾನಂದ ಮಠಪತಿ, ರಾಜು ಕಮಲಾಪುರೆ, ಉದಯ ಸುಲ್ತಾನಪುರೆ, ಪ್ರಕಾಶ ವಾಗ್ಮೋರೆ, ಗುರುಸ್ವಾಮಿ, ಸಂಗು ಕಾಳಗನೂರ, ಮಡಿವಾಳ ಅಮರಾವತಿ, ಅಕ್ಷಯ, ವಿಶ್ವನಾಥ ಆಡೆ, ಜೈಭೀಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net