ಕಳವು ಪ್ರಕರಣಗಳ ಪತ್ತೆಗೆ ಕ್ರಮವಹಿಸಿ, ಹಿಂದು ಜಾಗರಣಾ ವೇದಿಕೆ ಮನವಿ

take action to detect theft cases
ಹಿಂದು ಜಾಗರಣಾ ವೇದಿಕೆ ತಾಲೂಕು ಸಮಿತಿ ಸದಸ್ಯರು ಗಂಗಾವತಿ ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡ ಗೌಡರ್‌ಗೆ ಮನವಿ ಸಲ್ಲಿಸಿದರು. ವೇದಿಕೆ ಉತ್ತರ ಕರ್ನಾಟಕ ಸಂಚಾಲಕ ಶ್ರೀಕಾಂತ ಹೊಸ್ಕೇರಿ, ಜಿಲ್ಲಾ ಸಂಚಾಲಕ ವೀರೇಶ, ಪದಾಧಿಕಾರಿಗಳಾದ ಮಂಜುನಾಥ ಸಂಗಾಪುರ, ರುದ್ರೇಶ, ಹೂಗಾರ ಕುಮಾರ್, ರಮೇಶ, ವೀರೇಶ, ಮಾರುತಿ, ವೆಂಕಟೇಶ ಬಸವನದುರ್ಗ, ಗಾಂಧಿನಗರ ಮಂಜುನಾಥ, ದೇವಾ ಇತರರಿದ್ದರು.
Published on

ಗಂಗಾವತಿ: ತಾಲೂಕಿನ ಐತಿಹಾಸಿಕ ಪ್ರಸಿದ್ಧ ದೇವಾಲಯಗಳಲ್ಲಿ ನಡೆಯುತ್ತಿರುವ ಕಳವು ಪ್ರಕರಣಗಳನ್ನು ಪತ್ತೆ ಹಚ್ಚುವಂತೆ ಒತ್ತಾಯಿಸಿ ಹಿಂದು ಜಾಗರಣಾ ವೇದಿಕೆ ತಾಲೂಕು ಸಮಿತಿ ಸದಸ್ಯರು ನಗರದ ತಾಲೂಕು ಆಡಳಿತ ಸೌಧದ ಮುಂದೆ ಗುರುವಾರ ಪ್ರತಿಭಟನೆ ನಡೆಸಿ ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡ ಗೌಡರ್‌ಗೆೆ ಮನವಿ ಸಲ್ಲಿಸಿದರು.

ವೇದಿಕೆ ಜಿಲ್ಲಾ ಸಂಪರ್ಕ ಪ್ರಮುಖ ಎನ್.ಪದ್ಮನಾಭರಾಜು ಮಾತನಾಡಿ, ತಾಲೂಕಿನ ಆನೆಗೊಂದಿ ಬಳಿ ಪುರಾತನ ಪ್ರಸಿದ್ಧ ಪಂಪಾಸರೋವರದ ಶ್ರೀ ಜಯಲಕ್ಷ್ಮೀ ದೇವಾಲಯ ಕಳುವಾಗಿ ಹಲವು ತಿಂಗಳಾದರೂ ಕಳ್ಳರನ್ನು ಪೊಲೀಸರು ಪತ್ತೆ ಹಚ್ಚಿಲ್ಲ. ಇತ್ತೀಚಿಗೆ ದೇವಾಲಯಗಳ ಕಳವು ಪ್ರಕರಣ ಹೆಚ್ಚುತ್ತಿದ್ದು, ನಿಯಂತ್ರಿಸುವಲ್ಲಿ ಪೊಲೀಸರು ವಿಲವಾಗಿದ್ದಾರೆ. ಹಿಂದು ದೇವಾಲಯಗಳಿಗೆ ರಕ್ಷಣೆ ನೀಡುವುದರ ಜತೆಗೆ ಕಳ್ಳರನ್ನು ಪತ್ತೆ ಹಚ್ಚುವಂತೆ ಒತ್ತಾಯಿಸಿದರು.

ಇದೇ ವೇಳೆ ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್ ಮತ್ತು ಗ್ರಾಮೀಣ ಪಿಐ ರಂಗಪ್ಪ ದೊಡ್ಮನಿಗೆ ಮನವಿ ಸಲ್ಲಿಸಿದರು. ಹಿಂದುಪರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net