ಹಿಂದೂ ಸಂಘಟನೆ ಮುಗಿಸುವ ಹುನ್ನಾರ

udp-7-protest
Published on

ಉಡುಪಿ: ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ ಹಿಂದೂ ಸಂಘಟನೆ ಮುಖಂಡರ ವಿರುದ್ಧ ರೌಡಿ ಶೀಟರ್​ ತೆರೆಯುವುದು, ಗೂಂಡಾಕಾಯ್ದೆ ಬಳಸುವುದು ಸೇರಿದಂತೆ ನಿರಂತರ ಕಿರುಕುಳ ನೀಡುತ್ತಿದ್ದು, ಈ ಮೂಲಕ ಹಿಂದೂ  ಸಂಘಟನೆ ಮುಗಿಸುವ ಹುನ್ನಾರ ನಡೆಸುತ್ತಿದೆ ಎಂದು ವಿಹಿಂಪ ಪ್ರಾಂತ  ಪ್ರಮುಖ್​ ಸುನೀಲ್​ ಕೆ.ಆರ್​. ಹೇಳಿದರು.

ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಹಿಂದೂ ಸಂಘಟನೆಗಳ ಸಾಮಾಜಿಕ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ಪೋಲಿಸ್​ ಇಲಾಖೆಯ ಕಾನೂನು ವಿರೋಧಿ ಕ್ರಮವನ್ನು ಖಂಡಿಸಿ, ಹಿಂದೂ ವಿರೋಧಿ ಕಾಂಗ್ರೆಸ್​ ಸರ್ಕಾರದ ವಿರುದ್ಧ ಹಿಂದೂ ಜಾಗರಣಾ ವೇದಿಕೆಯ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ನಡೆದ ಬೃಹತ್​ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ಭಾಷಣ ಮಾಡಿದರೆ ಕೇಸು, ಸಾಮಾಜಿಕ ಜಾಲತಾಣದಲ್ಲಿ ಬರೆದರೆ ಕೇಸ್​ ಹಾಕುವ ಮೂಲಕ ಕಾರ್ಯಕರ್ತರನ್ನು ಕುಗ್ಗಿಸುವ ಕೆಲಸ ಮಾಡಲಾಗುತ್ತಿದೆ. ಸರ್ಕಾರದ ಅಲ್ಪಸಂಖ್ಯಾತರ ತುಷ್ಟೀಕರಣ ಬಗ್ಗೆ ಹಿಂದೂ ಸಮಾಜ ಜಾಗೃತವಾಗಬೇಕು ಎಂದರು.

ಗೋ ಹತ್ಯೆ ನಿಂತರೆ ಶಾಂತಿ

ರಾಜ್ಯ ಸರ್ಕಾರ ಆ್ಯಂಟಿ ಕಮ್ಯುನಲ್​ ೋರ್ಸ್​ ರಚಿಸಿದ ವಿಶೇಷ ಪಡೆ ಮೂಲಕ ಸಮಾಜವಿರೋಧಿ ಕೃತ್ಯಗಳನ್ನು ನಿಲ್ಲಿಸಬೇಕು. ಇದರಿಂದ ಸಮಾಜದಲ್ಲಿ ಕೋಮುಸೌಹಾರ್ದತೆ ಬೆಳೆಯಲಿದೆ. ಲವ್​ ಜಿಹಾದ್​, ಗೋ ಕಳ್ಳತನ, ಅಕ್ರಮ ಕಸಾಯಿಖಾನೆ ನಿಲ್ಲಿಸಿದರೆ ಶಾಂತಿ ನೆಲೆಸುತ್ತದೆ ಎಂದರು.

ಚಪ್ಪಾಳೆ ಕೆನ್ನೆಗೆ ತಟ್ಟಲಿದೆ

ಹಿಂದೂ ಸಮಾಜದ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಬಗ್ಗೆ ಮಾತನಾಡಿದರೆ ಅದು ಹೇಗೆ ಪ್ರಚೋದನೆಯಾಗುತ್ತದೆ. ಕಾಂಗ್ರೆಸ್​ ಸರ್ಕಾರ ಒಂದು ಕೈಯಿಂದ ಚಪ್ಪಾಳೆ ಹೊಡೆದರೆ ಕೆನ್ನೆಗೆ ತಟ್ಟುವುದು ಖಂಡಿತ ಎಂದು ಹೇಳಿದರು.

ಹಿಂದೂ ಸಂಟನೆ ಮುಖಂಡ ದಿನೇಶ್​ ಮೆಂಡನ್​, ವಾಸುದೇವ ಗಂಗೊಳ್ಳಿ, ಮಹೇಶ್​ ಬೈಲೂರು, ಉದ್ಯಮಿ ಅಜಯ್​ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್​ ಶೆಟ್ಟಿ, ಶಾಸಕರಾದ ಗುರುರಾಜ್​ ಗಂಟಿಹೊಳೆ, ಕಿರಣ್​ ಕೊಡ್ಗಿ, ಗುರ್ಮೆ ಸುರೇಶ್​ ಶೆಟ್ಟಿ, ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net