ಹಿಂದು ಜಾಗರಣ ವೇದಿಕೆಯಿಂದ ಶ್ರದ್ಧಾಂಜಲಿ

10-sunti01
Published on

ಸುಂಟಿಕೊಪ್ಪ: ಹಿಂದು ಜಾಗರಣ ವೇದಿಕೆ ವತಿಯಿಂದ ಮಾದಾಪುರದ ಗಣಪತಿ ದೇವಾಲಯದಲ್ಲಿ ಶುಕ್ರವಾರ ಶ್ರದ್ಧಾಂಜಲಿ ಸಭೆ ನಡೆಸಿ ದಿ.ಕುಟ್ಟಪ್ಪ ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು.

ಸ್ಥಳೀಯ ಮುಖಂಡ ಬೋಜೇಗೌಡ ಮಾತನಾಡಿ, ಅವರು ಹಿಂದು ಸಮಾಜ ಒಗ್ಗಟಾಗಿರಬೇಕು, ಮತೊಬ್ಬ ಕುಟ್ಟಪ್ಪ ಅವರನ್ನು ಕಳೆದುಕೊಳ್ಳಬಾರದು. ನಾವೆಲ್ಲರೂ ಒಂದಾಗಿ ಸಮಾಜವನ್ನು ಕಟ್ಟೋಣ. ಮೊದಲು ನಾವೆಲ್ಲರೂ ಹಿಂದು ಎಂಬುದನ್ನು ಮರೆಯದೆ ಒಂದಾಗಬೇಕಿದೆ ಎಂದು ಹೇಳಿದರು. ಕುಟ್ಟಪ್ಪ ಪುತ್ರ ಡಿ.ಕೆ.ಡಾಲಿ, ಹಿಂದು ಜಾಗರಣ ವೇದಿಕೆ ಜಿಲ್ಲಾ ಸಂಯೋಜಕ ಅಜಿತ್ ಕುಕ್ಕೇರಾ, ಪ್ರಮುಖರಾದ ಚೇತನ್ ಶಾಂತಿನಿಕೇತನ, ವಿನಯ್, ತಾಲೂಕು ಸಂಯೋಜಕ ವಿನಯ್ ಕುಮಾರ್, ಹೇಮಂತ್, ಗಪ್ಪು ಸೋಮಯ್ಯ, ಬಿಪಿನ್, ಸೂರಜ್, ಕೊಪ್ಪತಂಡ ಗಣೇಶ್, ಅಶೋಕ್ ಇತರರು ಇದ್ದರು.
ಸುನಿಲ್ ಮಾದಾಪುರ ಸ್ವಾಗತಿಸಿ, ನಿರ್ವಹಿಸಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net