ಕ್ಲಬ್​​ಹೌಸ್ ನಲ್ಲಿ ಹಿಂದು ದೇವರ ಬಗ್ಗೆ ಅವಹೇಳನ; 'ಕೈ' ನಾಯಕಿ ಸೇರಿದಂತೆ ಮೂವರ ವಿರುದ್ದ ದೂರು

WhatsApp Image 2022-06-18 at 4.55.44 PM
Published on

ಮಂಗಳೂರು: ಹಿಂದೂ ದೇವರ ಬಗ್ಗೆ ಅವಹೇಳನ ಮಾಡಿರುವ ಆರೋಪದ ಮೇಲೆ ಕಾಂಗ್ರೆಸ್​ ಮುಖಂಡರ ವಿರುದ್ದ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾಂಗ್ರೆಸ್ ಐಟಿ ಸೆಲ್ ಕಾರ್ಯದರ್ಶಿ ಶೈಲಜ ಅಮರ‌ನಾಥ, ಪ್ರೀತು ಶೆಟ್ಟಿ, ಅನೀಲ್, ಪುನಿತ್ ಇತರರ ವಿರುದ್ಧ ಪ್ರವೀಣ್ ಕುಮಾರ್ ಎಂಬುವರು ದೂರು ನೀಡಿದ್ದಾರೆ. ಸಾಮಾಜಿಕ ಜಾಲತಾಣ ಕ್ಲಬ್​​ಹೌಸ್ ನಲ್ಲಿ ಶ್ರೀರಾಮ, ಸೀತೆ, ಹನುಮಂತ ದೇವರನ್ನು ಅಶ್ಲೀಲವಾಗಿ ಅವಹೇಳನ ಮಾಡಲಾಗಿದೆ. ಅಲ್ಲದೇ ಶ್ರೀರಾಮ ಸಲಿಂಗಕಾಮಿ, ರಾಮನಿಗೆ ಹಂದಿ ಮಾಂಸ ಇಷ್ಟ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಹಿಂದೂಗಳ ಧಾರ್ಮಿಕ ನಂಬಿಕೆಗೆ, ಭಾವನೆಗೆ ಧಕ್ಕೆ ತಂದಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ವಿಎಚ್​​ಪಿ ಮುಖಂಡರು ಒತ್ತಾಯ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net