

ಹುಬ್ಬಳ್ಳಿ: ಅಂತಾರಾಷ್ಟ್ರೀಯ ಹಿಂದೂ ಪರಿಷತ್, ರಾಷ್ಟ್ರೀಯ ಬಜರಂಗ ದಳ ಆಶ್ರಯದಲ್ಲಿ ಸ್ವಾಸ್ಥ್ಯ ಹಿಂದೂ, ಸುರತ ಹಿಂದೂ, ಸಮೃದ್ಧ ಹಿಂದೂ ಸಂಕಲ್ಪದೊಂದಿಗೆ ಹಿಂದೂ ಚಿಂತನಾ ಸಭೆಯನ್ನು ಜೂನ್ 16ರಂದು ಬೆಳಗ್ಗೆ 11ಕ್ಕೆ ನಗರದ ಗೋಕುಲ ರಸ್ತೆ ನಾನಕಿ ಕನ್ವೆನ್ಷನ್ ಹಾಲ್ ನಲ್ಲಿ ಏರ್ಪಡಿಸಲಾಗಿದೆ.
ಅಂತಾರಾಷ್ಟ್ರೀಯ ಹಿಂದೂ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಡಾ. ಪ್ರವಿಣಭಾಯ್ ತೊಗಾಡಿಯಾ ಅಧ್ಯಕ್ಷತೆ ವಹಿಸುವರು. ಪರಿಷತ್ ಕರ್ನಾಟಕ ಕಾರ್ಯಾಧ್ಯಕ್ಷ ರಮೇಶ ಕುಲಕರ್ಣಿ ಉಪಸ್ಥಿತರಿರುವರು.