

ಮಡಿಕೇರಿ: ಯುಗಾದಿ ಹಬ್ಬದ ಪ್ರಯುಕ್ತ ವಿಶ್ವ ಹಿಂದೂ ಪರಿಷತ್ತ್ ಮತ್ತು ಬಜರಂಗದಳ ವತಿಯಿಂದ ಹಿಂದೂ ಸಮಾಜ ಬಾಂಧವರಿಗಾಗಿ ಮಾ.೨೪ರಿಂದ ೨೬ರವರೆಗೆ ಕ್ರಿಕೆಟ್ ಪಂದ್ಯಾಟವನ್ನು ನಾಪೋಕ್ಲುವಿನ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಬಜರಂಗದಳದ ಸಂಚಾಲಕ ಬಿ.ಸಿ.ರಾಧಕೃಷ್ಣ ರೈ ತಿಳಿಸಿದರು.
ಹಿಂದೂ ಚಾಂಪಿಯನ್ ಟ್ರೋಫಿಯಡಿಯಲ್ಲಿ ಕಿಕೆಟ್ ಮತ್ತು ಹಗ್ಗಜಗ್ಗಾಟ ಪಂದ್ಯಾಟ ನಡೆಯಲಿದೆ. ಈಗಾಗಲೇ ಕ್ರಿಕೆಟ್ ಪಂದ್ಯಕ್ಕೆ ೩೦ ತಂಡ, ಹಗ್ಗಜಗ್ಗಾಟಕ್ಕೆ ೧೬ ತಂಡಗಳು ನೋಂದಾಯಿಸಿಕೊಂಡಿದೆ. ಕ್ರಿಕೆಟ್‌ನಲ್ಲಿ ಪ್ರಥಮ ಸ್ಥಾನ ಪಡೆದ ತಂಡಕ್ಕೆ ೫೦,೦೦೦ ನಗದು ಮತ್ತು ಟ್ರೋಫಿ, ದ್ವಿತೀಯ ೨೫,೦೦೦ ನಗದು ಮತ್ತು ಟ್ರೋಫಿ ನೀಡಿಗೌರವಿಸಲಾಗುವುದು. ಹಗ್ಗಜಗ್ಗಾಟದಲ್ಲಿ ಪ್ರಥಮ ಸ್ಥಾನ ಪಡೆದ ತಂಡಕ್ಕೆ ೧೫,೦೦೦ ನಗದು ಮತ್ತು ಟ್ರೋಫಿ, ದ್ವಿತೀಯ ೧೦,೦೦೦ ನಗದು ಮತ್ತು ಟ್ರೋಫಿ ನೀಡಿಗೌರವಿಸಲಾಗುವುದು ಎಂದು ಮಾಹಿತಿ ನೀಡಿದರು.
ಮಾ.೨೪ರಂದು ಬೆಳಗ್ಗೆ ೯.೩೦ ಗಂಟೆಗೆ ಕ್ರಿಕೆಟ್ ಪಂದ್ಯಾಟದ ಉದ್ಘಾಟನೆ ಕಾರ್ಯಕ್ರಮ ವಿಶ್ವ ಹಿಂದೂ ಪರಿಷತ್ ನಾಪೋಕ್ಲು ಸಚೀನ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಬೆಳೆಗಾರ ಬಿದ್ದಾಟಂಡ ದಿನೇಶ್, ಹಿರಿಯ ವಕೀಲ ಹಾಗೂ ಸಮಾಜ ಸೇವಕ ಅಜ್ಜಿಕುಟ್ಟಿರ.ಎಸ್.ಪೊನ್ನಣ್ಣ, ಪ್ರಮುಖರಾದ ಮುನಿಕೃಷ್ಣ, ಸಮಾಜಸೇವಕ ಡಾ.ಮಂತರ್ ಗೌಡ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಮಾ.೨೬ರಂದು ೯ ಗಂಟೆಗೆ ಮೊದಲ ಸೆಮಿಫೈನಲ್, ೧೦.೩೦ ಗಂಟೆಗೆ ೨ನೇ ಸೆಮಿಫೈನಲ್, ೧೨.೩೦ ಗಂಟೆಗೆ ಫೈನಲ್ ಪಂದ್ಯಾಟ ನಡೆಯಲಿದೆ. ಕಾರ್ಯಕ್ರಮದಲ್ಲಿ ಶಾಸಕ ಕೆ.ಜಿ.ಬೋಪಯ್ಯ, ಪ್ರಮುಖರಾದ ಅರೆಯಡ ರತ್ನ ಪೆಮ್ಮಯ್ಯ, ಗೋರಕ್ಷಕ್ ಪ್ರಮುಖ್ ದಿಲೀಪ್ ಪೂಜಾರಿ, ನಾಪೋಕ್ಲು ಶಿವಾಜಿ ಕ್ಲಬ್ ಅಧ್ಯಕ್ಷ ದೀಪು ದೇವಯ್ಯ ಇತರರು ಪಾಲ್ಗೊಳ್ಳಲಿದ್ದಾರೆ. ಅಂದು ೩.೩೦ ಗಂಟೆಗೆ ಹಗ್ಗಜಗ್ಗಾಟ ಪಂದ್ಯದ ಉದ್ಘಾಟನೆ ನಡೆಯಲಿದ್ದು, ನಾಪೋಕ್ಲು ಗ್ರಾ.ಪಂ ಸದಸ್ಯ ಬಿ.ಎಂ.ಪ್ರದೀಪ್ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಧಾರ್ಮಿಕ ಹಾಗೂ ಸಮಾರೋಪ ಸಮಾರಂಭ ಕಾರ್ಯಕ್ರಮ ಬಜರಂಗದಳದ ಸಂಚಾಲಕ ಬಿ.ಸಿ.ರಾಧಕೃಷ್ಣ ರೈ ಅಧ್ಯಕ್ಷತೆಯಲ್ಲಿ ನಡೆಯಲಿದೆ. ದಿಕ್ಸೂಚಿ ಭಾಷಣಕಾರರಾಗಿ ವಾಗ್ಮಿ ಚೈತ್ರಾ ಕುಂದಾಪುರ, ಬಜರಂಗದಳದ ರಾಜ್ಯ ಸಹಸಂಘಟಕ ಪ್ರಭಂಜನ್, ಮುಖ್ಯ ಅತಿಥಿಗಳಾಗಿ ವಿಶ್ವ ಹಿಂದೂ ಪರಿಷತ್ತ್‌ನ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ ಜೀ, ಕಾರ್ಯಧ್ಯಕ್ಷ ಸುರೇಶ್ ಮುತ್ತಪ್ಪ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್ತ್ ಸಂಚಾಲಕ ಸಚಿನ್ ಸುಬ್ಬಯ್ಯ, ಸಹ ಸಂಚಾಲಕ ಅರೆಯಡ ನಂಜಪ್ಪ, ಬಜರಂಗದಳದ ಸದಸ್ಯರಾದ ಎಂ.ಸಿ.ನಾಗರಾಜ್, ಟಿ.ಎಚ್.ಪ್ರದೀಪ್ ಉಪಸ್ಥಿತರಿದ್ದರು.