ರೈತ ಹಿತ ಕಾಯಲು ಆದ್ಯತೆ ನೀಡಿ

dairy election
Published on

ವಿಜಯವಾಣಿ ಸುದ್ದಿಜಾಲ ನಂದಗುಡಿ
ಹೋಬಳಿಯ ಹಿಂಡಿಗನಾಳ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾಗಿ ಕಾಂಗ್ರೆಸ್ ಬೆಂಬಲಿತ 6, ಬಿಜೆಪಿ ಬೆಂಬಲಿತ 3, ಇಬ್ಬರು ಪಕ್ಷೇತರರು ಹಾಗೂ ಒಂದು ಸ್ಥಾನಕ್ಕೆ ಅವಿರೋಧ ಆಯ್ಕೆ ಮಾಡಲಾಯಿತು.
ಚುನಾವಣೆ ಪ್ರಕ್ರಿಯೆ ಪ್ರಾರಂಭಗೊಂಡ ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕದ ನಿಗದಿತ ಸಮಯಕ್ಕೆ ಸರಿಯಾಗಿ ಎಸ್ಸಿ ಮೀಸಲು ಸ್ಥಾನಕ್ಕೆ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಮುನಿಯಪ್ಪ ಅವಿರೋಧ ಅಯ್ಕೆಯಾಗಿದ್ದು, ಚುನಾವಣೆಯಲ್ಲಿ ಸೋಮಶೇಖರ್, ಎಚ್.ಡಿ. ಶಿವಣ್ಣ, ಹರೀಶ್, ಮುನಿರಾಜು, ಕಲ್ಪನಾ, ಸೊಣ್ಣಮ್ಮ, ಆನಂದ್, ಗುಡೇಗೌಡ, ಲಕ್ಷ್ಮಮ್ಮ, ಎಚ್.ಕೆ. ರಾಮಚಂದ್ರೇಗೌಡ, ಎಚ್.ಟಿ. ವೆಂಕಟೇಶ್ ನೂತನ ನಿರ್ದೇಶಕರಾಗಿ ಆಯ್ಕೆಯಾದರು.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಾಜಶೇಖರಗೌಡ ಮಾತನಾಡಿ, ಹೈನುಗಾರರ ಹಿತ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಬಮುಲ್‌ನ ಎಲ್ಲ ಸೌಲಭ್ಯಗಳನ್ನು ಸಮರ್ಪಕವಾಗಿ ಬಳೆಸಿಕೊಂಡು ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘವನ್ನು ಪ್ರಗತಿಯತ್ತ ಮುನ್ನೆಡೆಸಬೇಕು ಎಂದರು.
ಚುನಾವಣಾಧಿಕಾರಿ ಶಿವಕುಮಾರ್, ತಾಪಂ ಮಾಜಿ ಅಧ್ಯಕ್ಷ ಕೆಂಚೇಗೌಡ, ನೆಲವಾಗಿಲು ಎಸ್‌ಎಫ್‌ಸಿಎಸ್ ಮಾಜಿ ಅಧ್ಯಕ್ಷ ಎಚ್.ಕೆ. ನಾರಾಯಣಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಎಚ್.ಎನ್. ಧರ್ಮೇಶ್, ಗ್ರಾಪಂ ಸದಸ್ಯರಾದ ಎಚ್.ಎಂ. ಮೂರ್ತಿ, ಮಧುಸೂದನ್, ಸಲೀಂ, ಕರೇಗೌಡ, ಸರೋಜಮ್ಮ ಜಯರಾಮ್, ಖಾದರ್, ನೂರುಲ್ಲಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net