

ಬೆಳಗಾವಿ: ರಾಷ್ಟ್ರ ಭಾಷೆಯಾಗಿರುವ ಹಿಂದಿ ಭಾಷೆಯನ್ನು ಪ್ರತಿಯೊಬ್ಬರೂ ಕಲಿಯಬೇಕು. ಇದು ದೇಶವನ್ನು ಒಗ್ಗೂಡಿಸಲು ಸಹಕಾರಿಯಾಗಿದೆ ಎಂದು ಗೋಗಟೆ ಪ.ಪೂ ಮಹಾವಿದ್ಯಾಲಯದ ಪ್ರಾಚಾರ್ಯ ಅಂಜನಾ ಕೇರೂರ ಅಭಿಪ್ರಾಯಪಟ್ಟರು.
ನಗರದ ಗೋಗಟೆ ಪ.ಪೂ ಮಹಾವಿದ್ಯಾಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಹಿಂದಿ ದಿವಸ ಸಮಾರಂಭದಲ್ಲಿ ಅವರು ಮಾತನಾಡಿದರು. ಹಿಂದಿ ಭಾಷೆಗೆ ತನ್ನದೆಯಾದ ಇತಿಹಾಸವಿದೆ. ಹಿಂದಿ ಕಲಿಯುವುದರಿಂದ ದೇಶದ ಯಾವುದೇ ಮೂಲೆಯಲ್ಲಿಯ ಜನರೊಂದಿಗೆ ಸಂವಹನ ನಡೆಸಬಹುದು ಎಂದರು. ಹಿಂದಿ ಭಾಷೆ ಮಾತನಾಡುವವರ ಸಂಖ್ಯೆ ವಿಶ್ವದಲ್ಲಿ ಹೆಚ್ಚಾಗುತ್ತಿದೆ. ಎಲ್ಲರೂ ಹಿಂದಿ ಭಾಷೆಯನ್ನು ಕಲಿಯಬೇಕು ಎಂದರು.
ಪೊ.ಡಾ.ಬಿ.ಡಿ ಪಾಟೀಲ, ಪೊ.ವಿಶಾಲಾ ಪಾಟೀಲ, ಪೊ.ಅಶ್ವಿನಿ ಕಾಮು, ಶ್ರೇಯಾ ಬಾತಖಂಡೆ, ದಿಶಾ ಜೈನ್, ಮಾನಸಿ ಕೋಳಿ ಇತರರಿದ್ದರು. ಪೋಟೊ:174ಆನಂದ5: ಬೆಳಗಾವಿ ನಗರದ ಗೋಗಟೆ ಪ.ಪೂ ಮಹಾವಿದ್ಯಾಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಹಿಂದಿ ದಿವಸ ಸಮಾರಂಭದಲ್ಲಿ ವಿದ್ಯಾರ್ಥಿಗಳಿಂದ ನಾಟಕ ಪ್ರದರ್ಶನ ಜರುಗಿತು. ಶ್ರೇಯಾ ಬಾತಖಂಡೆ , ದಿಶಾ ಜೈನ್,ಮಾನಸಿ ಕೋಳಿ ಇತರರಿದ್ದರು.