ಹಿಂದಿ ದಿವಸ ಆಚರಣೆ ವಿರೋದಿಸಿ ಪ್ರತಿಭಟನೆ

14Jaggu5
ವಿವಿಧತೆಗೆ ಧಕ್ಕೆ ತರುವ ಹಿಂದಿ ದಿವಸ ಆಚರಣೆ ನಿಲ್ಲಿಸಬೇಕು ಎಂದು ಒತ್ತಾಯಿಸಿ ಯುವ ಕರ್ನಾಟಕ ವೇದಿಕೆ ಕಾರ್ಯಕರ್ತರು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದರು. ಸದಾನಂದ, ಶಂಭು ಗಡಾದ, ಕೃಷ್ಣಾ ಹೊಟ್ಟಿ, ಗೋವಿಂದ ವತನದಾರ್, ಸೋಮು ಹಿರೇಮಠ ಇತರರಿದ್ದರು.
Published on

ಬೆಳಗಾವಿ: ವಿವಿಧತೆಗೆ ಧಕ್ಕೆ ತರುವ ಹಿಂದಿ ದಿವಸ ಆಚರಣೆ ನಿಲ್ಲಿಸಿ, ದೇಶದ ಎಲ್ಲ ಭಾಷೆಗಳಿಗೂ ಸಮಾನ ಗೌರವ, ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಯುವ ಕರ್ನಾಟಕ ವೇದಿಕೆಯಿಂದ ನಗರದ ಕನ್ನಡ ಸಾಹಿತ್ಯ ಭವನದಿಂದ ಜಿಲ್ಲಾಕಾರಿ ಕಚೇರಿ ವರೆಗೆ ಪ್ರತಿಭಟನೆ ನಡೆಸಲಾಯಿತು.

ಕೇಂದ್ರ ಸರ್ಕಾರ ಕನ್ನಡಿಗರ ತೆರಿಗೆ ಹಣದಲ್ಲಿ ಸೆ.14ರಂದು ಹಿಂದಿ ದಿವಸ ಆಚರಿಸುವ ಮೂಲಕ ಕರ್ನಾಟಕ ಮತ್ತು ಕನ್ನಡಿಗರಿಗೆ ಅನ್ಯಾಯ ಮಾಡುತ್ತಿದೆ. ಹಿಂದಿ ಬಳಕೆ ಹೆಚ್ಚಿಸುವ ಪ್ರಯತ್ನ ನಡೆಯುತ್ತಿದೆ. ಸಂವಿಧಾನದ 344 ಮತ್ತು 351 ವಿಯಲ್ಲಿ 22 ಭಾಷೆಗಳನ್ನು ರಾಷ್ಟ್ರೀಯ ಭಾಷೆಗೆಳೆಂದು ಘೋಷಿಸಲಾಗಿದೆ. ಭಾರತದ ಕರೆನ್ಸಿಯಲ್ಲೂ ಅಕೃತ ಭಾಷೆ ಬರೆಯಲಾಗಿದೆ. ಉತ್ತರ ಭಾರತದ ಹಿಂದಿಯನ್ನು ಕರ್ನಾಟಕದ ಮೇಲೆ ಹೇರುವುದನ್ನು ಖಂಡಿಸುತ್ತೇವೆ. ಮಹಾರಾಷ್ಟ್ರದಲ್ಲಿ ಮರಾಠ ಮತ್ತು ಇಂಗ್ಲಿಷ್, ತಮಿಳುನಾಡಿನಲ್ಲೂ ತಮಿಳು ಮತ್ತು ಇಂಗ್ಲಿಷ್ ದ್ವಿಭಾಷಾ ನೀತಿಯಿದೆ. ಅದೇ ರೀತಿ ಕರ್ನಾಟಕದಲ್ಲೂ ಆಗಬೇಕು. ಆದರೆ ತ್ರಿಭಾಷೆನೀತಿ ಹೇರುವುದು ತಪ್ಪು. ಕನ್ನಡಿಗರ ತೆರಿಗೆ ದುಡ್ಡಿನಲ್ಲಿ ಹಿಂದಿ ದಿವಸ ಆಚರಣೆ ಮಾಡುವುದನ್ನು ವಿರೋಸುತ್ತೇವೆ. ಉತ್ತರ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವವರನ್ನು ತಡೆಯಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.
ಯುವ ಕರ್ನಾಟಕ ವೇದಿಕೆ ಜಿಲ್ಲಾಧ್ಯಕ್ಷ ಸದಾನಂದ, ಶಂಭು ಗಡಾದ, ಕೃಷ್ಣಾ ಹೊಟ್ಟಿ, ಗೋವಿಂದ ವತನದಾರ್, ಸೋಮು ಹಿರೇಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net