ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಹಿಂದಿ ದಿನಾಚರಣೆ

Hindi Day celebrated at JSS Women's College
Published on

ಮೈಸೂರು: ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಗುರುವಾರ ಪದವಿ ಮತ್ತು ಪದವಿಪೂರ್ವ ಕಾಲೇಜಿನ ಹಿಂದಿ ವಿಭಾಗದಿಂದ ಹಿಂದಿ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮಹಾರಾಜ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥ ಡಾ. ಬಸವರಾಜ್ ಕೆ ಬಾರ್ಕರ್ ಮಾತನಾಡಿ, 1949ರಲ್ಲಿ ಹಿಂದಿಯನ್ನು ದೇಶದ ಅಧಿಕೃತ ಭಾಷೆಯಾಗಿ ಅಂಗಿಕರಿಸಲಾಯಿತು. ಹಿಂದಿ ಭಾಷಾ ಸಂವಹನ ಮತ್ತು ಸಾಂಸ್ಕೃತಿಕ ಗುರುತನ್ನು ಬಲಪಡಿಸುವ ಸದುದ್ದೇಶದಿಂದ ಹಿಂದಿ ದಿನಾಚರಣೆ ಮಾಡಲಾಗುತ್ತದೆ ಎಂದರು.

ಹಿಂದಿ ದಿವಸವು ನಮ್ಮ ಗುರುತರ ಪಾತ್ರವನ್ನು ನೆನಪಿಸುತ್ತದೆ. ಇದು ಪರಸ್ಪರ ರಾಜ್ಯಗಳ ನಡುವೆ ಸಂವಹನ ಸಂಪರ್ಕ ಕಲ್ಪಿಸುವಂತೆ ಕಾರ್ಯನಿರ್ವಹಿಸುತ್ತದೆ. ಭಾಷೆಯು ಸಹಬಾಳ್ವೆ, ಸ್ಥಳಿಯ ಸಂಸ್ಕೃತಿ ಸಂಪ್ರದಾಯಗಳು ಮತ್ತು ವೈಯಕ್ತಿಕ ಗುರುತನ್ನು ಸಾಧಿಸುವ ಕಾರಣ ಮೌಲ್ಯಯುತವಾಗಿದೆ ಎಂದು ಹೇಳಿದರು.

ಅನುವಾದ ಮತ್ತು ವ್ಯಾಖ್ಯಾನ ವ್ಯಾಪ್ತಿಯಲ್ಲಿ ಹಿಂದಿ ಭಾಷೆಯು ಪ್ರಮುಖ ಪಾತ್ರವಹಿಸುತ್ತದೆ. ಪ್ರಪಂಚದೊಂದಿಗೆ ದೇಶವು ವ್ಯವಹಾರ ಚಟುವಟಿಕೆಗಳನ್ನು ಹೆಚ್ಚಿಸಿಕೊಳ್ಳುತ್ತಿರುವ ಕಾರಣ ಈ ಸಂದರ್ಭದಲ್ಲಿ ಹಿಂದಿ ಮತ್ತು ಪ್ರಾದೇಶಿಕ ಭಾಷೆಗಳು ವಿದೇಶಿ ಭಾಷೆಗಳ ನಡುವೆ ಸಂವಹನ ಬೆಳೆಸಲು ಭಾಷಾಂತರಕಾರರಿಗೆ ಬೇಡಿಕೆ ಇದೆ. ಈ ಅನುವಾದ ಕ್ಷೇತ್ರವು ಹೆಚ್ಚಿನ ಹಣವನ್ನು ಗಳಿಸುವ ಸಾಮರ್ಥ್ಯವನ್ನು ನಿಡುತ್ತದೆ ಎಂದರು.

ಶಿಕ್ಷಣ, ಸಾಹಿತ್ಯ, ಪ್ರವಾಸೊದ್ಯಮಗಳ ವ್ಯವಹಾರ ಸುಗಮವಾಗಲು ಅಂತಾರಾಷ್ಟ್ರಿಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಅನುವಾದವು ಅಗತ್ಯವಾಗಿರುತ್ತದೆ. ಹಿಗಾಗಿ ಹಿಂದಿ ಕಲಿಕೆ ಸಾಂಸ್ಕೃತಿಕ ಸಂಬಂಧಗಳನ್ನು ಮಾತ್ರ ಬಲಪಡಿಸುತ್ತದೆ ಅಲ್ಲದೇ ಲಾಭದಾಯಕ ವೃತ್ತಿ ಅವಕಾಶಗಳನ್ನು ಸಹ ತೆರೆಯುತ್ತದೆ. ಅಂತಿಮವಾಗಿ, ಹಿಂದಿ ಕಲಿಕೆ ನಮ್ಮ ಭಾಷಾ ಅರಿವನ್ನು ಸುಧಾರಿಸುತ್ತದೆ ಎಂದರು. ಕಾಲೇಜಿನ ಪ್ರಾಂಶುಪಾಲ ಡಾ. ರೇಚಣ್ಣ ಅಧ್ಯಕ್ಷತೆ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net