ಭಾಷೆ ದೇವಿ ಸರಸ್ವತಿಯ ಕೃಪೆಯ ಪ್ರತೀಕ: ಸುಭಾಶ್ ಝಾ ಹೇಳಿಕೆ

New Project (3)
Published on

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ ಹಿಂದಿ ಭಾಷೆ ಸರಸ್ವತಿಯ ವಾಣಿ. ಸರಸ್ವತಿ ಜ್ಞಾನ ಮತ್ತು ವಾಣಿಯ ದೇವಿ. ಹಿಂದಿ ಕೇವಲ ಭಾಷೆಯಲ್ಲ, ಅದು ನಮ್ಮ ನಾಗರಿಕತೆ ಮತ್ತು ದೇವಿ ಸರಸ್ವತಿಯ ಕೃಪೆಯ ಪ್ರತೀಕ ಎಂದು ವೈಬ್ರೆಂಟ್ ಎಜುಕೇಷನಲ್ ಚಾರಿಟೆಬಲ್ ಟ್ರಸ್ಟ್‌ನ ಟ್ರಸ್ಟಿ ಸುಭಾಶ್ ಝಾ ಹೇಳಿದರು. ಕಲ್ಲಬೆಟ್ಟುವಿನಲ್ಲಿರುವ ನ್ಯೂ ವೈಬ್ರೆಂಟ್ ಪದವಿ ಪೂರ್ವ ಕಾಲೇಜಿನಲ್ಲಿ ಕಾಲೇಜಿನ ಸಭಾಂಗಣದಲ್ಲಿ ಹಿಂದಿ ದಿವಸ ಆಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನ್ಯಾನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಿಂದಿ ವಿಭಾಗದ ಪ್ರೊ.ಡಾ.ಕೆ.ವಿ.ಉಮಾಶಂಕರ್ ಮುಖ್ಯ ಅತಿಥಿಯಾಗಿ ಮಾತನಾಡಿ ಹಿಂದಿ ಭಾಷೆಯ ಮಹತ್ವ ಮತ್ತು ಅದರ ಅಧ್ಯಯನದ ಲಾಭ ವಿವರಿಸಿದರು. ವೈಬ್ರೆಂಟ್ ಎಜುಕೇಶನಲ್ ಚಾರಿಟೆಬಲ್ ಟ್ರಸ್ಟ್‌ನ ಟ್ರಸ್ಟಿ ಚಂದ್ರಶೇಖರ ರಾಜೇ ಅರಸ್ ಮಾತನಾಡಿದರು. ವೈಬ್ರೆಂಟ್ ಎಜುಕೇಶನಲ್ ಚಾರಿಟೆಬಲ್ ಟ್ರಸ್ಟ್‌ನ ಟ್ರಸ್ಟಿ, ಪ್ರಾಂಶುಪಾಲ ಡಾ.ಎಸ್.ಎನ್.ವೆಂಕಟೇಶ್ ನಾಯಕ್, ಟ್ರಸ್ಟಿಗಳಾದ ಮೆಹಬೂಬ್ ಬಾಷಾ, ಯೋಗೇಶ್ ಬೇಡೇಕರ್, ಶರತ್ ಗೋರೆ, ಕಾಲೇಜಿನ ಆಡಳಿತಾಧಿಕಾರಿ ಅರುಣ್ ಡಿಸಿಲ್ವಾ ಉಪಸ್ಥಿತರಿದ್ದರು. ಉಪಪ್ರಾಂಶುಪಾಲೆ, ಹಿಂದಿ ವಿಭಾಗ ಮುಖ್ಯಸ್ಥೆ ಡಾ.ವಿ.ರಶ್ಮಿ ಅರಸ್ ಪ್ರಸ್ತಾವನೆಗೈದರು. ಹಿಂದಿ ದಿವಸದ ಅಂಗವಾಗಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ ಆಯೋಜಿಸಲಾಯಿತು. ಉಪನ್ಯಾಸಕ ಸೋಮನಿಂಗ ವಿಜೇತರ ಪಟ್ಟಿ ವಾಚಿಸಿದರು. ವಿದ್ಯಾರ್ಥಿನಿ ನತಾಶಾ ಕಾರ್ಯಕ್ರಮ ನಿರೂಪಿಸಿದರು. ಆಂಕಿತಾ ಸ್ವಾಗತಿಸಿದರು. ವಿದ್ಯಾರ್ಥಿ ಆಮೀನ್ ಪರಿಚಯಿಸಿದರು. ಅನುಪಮಾ ವಂದಿಸಿದರು.

ಮಕ್ಕಳು ಹಿಂದಿ ಅರಿತುಕೊಂಡರೆ, ಐಐಟಿ, ಮೆಡಿಕಲ್ ಮಾಡಲು ದೇಶದ ಯಾವ ಮೂಲೆಯಲ್ಲಾದರೂ ಹೋದಾಗ ಅವರಿಗೆ ಸುಲಭವಾಗುತ್ತದೆ. ಮಕ್ಕಳ ಆತ್ಮವಿಶ್ವಾಸ ಹೆಚ್ಚುತ್ತದೆ. ಇಂದು ಹಿಂದಿ ಸಂಪರ್ಕ ಭಾಷೆಯಾಗಿಬಿಟ್ಟಿದೆ. ಇಂದಿನ ಮಕ್ಕಳು ಎಷ್ಟು ಚೆನ್ನಾಗಿ ಇಂಗ್ಲಿಷ್ ತಿಳಿದರೂ, ಅಷ್ಟೇ ಚೆನ್ನಾಗಿ ಹಿಂದಿಯನ್ನೂ ತಿಳಿದರೆ ಅದು ಅವರಿಗೆ ಬಹಳ ಉಪಯುಕ್ತವಾಗುತ್ತದೆ. ಚಂದ್ರಶೇಖರ ರಾಜೇ ಅರಸ್ ವೈಬ್ರೆಂಟ್ ಎಜುಕೇಷನಲ್ ಚಾರಿಟೆಬಲ್ ಟ್ರಸ್ಟ್ ಟ್ರಸ್ಟಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net