ಎಕ್ಸಲೆಂಟ್ ಶಾಲೆಯಲ್ಲಿ ಹಿಂದಿ ದಿವಸ

LKP 15-1
ಲೋಕಾಪುರ ಪಟ್ಟಣದ ದಾನೇಶ್ವರಿ ಶಿಕ್ಷಣ ಸಂಸ್ಥೆಯ ಎಕ್ಸಲೆಂಟ್ ಪಬ್ಲಿಕ್ ಸ್ಕೂಲ್‌ನಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಹಿಂದಿ ದಿವಸ ಕಾರ್ಯಕ್ರಮ ನಿಮಿತ್ತ ಮಕ್ಕಳು ವಿವಿಧ ವೇಷ ಭೂಷಣದಲ್ಲಿ ಗಮನ ಸೆಳೆದರು.
Published on

ಲೋಕಾಪುರ: ಪಟ್ಟಣದ ದಾನೇಶ್ವರಿ ಶಿಕ್ಷಣ ಸಂಸ್ಥೆಯ ಎಕ್ಸಲೆಂಟ್ ಪಬ್ಲಿಕ್ ಸ್ಕೂಲ್‌ನಲ್ಲಿ ರಾಷ್ಟ್ರೀಯ ಹಿಂದಿ ದಿವಸ ಬುಧವಾರ ಆಚರಿಸಲಾಯಿತು.

ಸಂಸ್ಥೆಯ ಸದಸ್ಯ ಸೋಮಶೇಖರ ಪಂಚಕಟ್ಟಿಮಠ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಅತಿಥಿಯಾಗಿ ಪ್ರಾಚಾರ್ಯೆ ಸುನಂದಾ ಪಾಟೀಲ ಹಾಗೂ ಅತಿಥಿಗಳಾಗಿ ಕಾಲೇಜಿನ ಪ್ರಾಚಾರ್ಯ ಬಿ.ವೈ.ಮಡಿವಾಳರ, ಪ್ರೌಢಶಾಲೆ ಮುಖ್ಯಶಿಕ್ಷಕ ಎನ್.ಎಲ್.ಪಾಟೀಲರು ಉಪಸ್ಥಿತರಿದ್ದರು.

ಶಾಲೆ ಮಕ್ಕಳಿಂದ ಬೇಟಿ ಬಚಾವೋ ಬೇಟಿ ಪಢಾವೋ ಕುರಿತು ಕಿರುನಾಟಕ ಪ್ರದರ್ಶನವಾಯಿತು. ಚಿಕ್ಕಮಕ್ಕಳಿಂದ ಮೀರಾಬಾಯಿ, ಕಬೀರ, ಪ್ರೇಮಚಂದ ಮೊದಲಾದ ಸಂತರು, ಕವಿಗಳು ಹಾಗೂ ರಾಜ್ಯದ ಎಲ್ಲ ಭಾಷೆಯ ವೇಷಭೂಷಣಗಳ ಪ್ರದರ್ಶನ ಮಾಡಲಾಯಿತು. ರಾಷ್ಟ್ರೀಯ ಹಿಂದಿ ಭಾಷಾ ಪರೀಕ್ಷೆಯಲ್ಲಿ 1ರಿಂದ 10ನೇ ತರಗತಿಯವರೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪಾರಿತೋಷಕ ನೀಡಿ ಗೌರವಿಸಲಾಯಿತು. ಪರೀಕ್ಷಾ ಮೇಲ್ವಿಚಾರಣೆ ಮಾಡಿದ ಹಿಂದಿ ವಿಭಾಗದ ಮುಖ್ಯಸ್ಥ ಅಶೋಕ ಲಮಾಣಿ ಅವರನ್ನು ಗೌರವಿಸಲಾಯಿತು. ಆರೀ ಜೀರಗಾಳ, ನೂರಜಹಾನ ಗುದಗಿ ಇತರರಿದ್ದರು. ಹೀನಾ ಮತ್ತು ಕಲಾವತಿ ಕಾರ್ಯಕ್ರಮ ನಿರೂಪಿಸಿದರು. ಇಮಾಮ ಡಂಗಿ ಸ್ವಾಗತಿಸಿದರು. ವಿಜಯಲಕ್ಷ್ಮೀ ಸೊಗಲದ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net