ವಿಜಯಪುರ: ಸೈನಿಕ ಶಾಲೆಯಲ್ಲಿ ಗುಡ್ಡಗಾಡು ಓಟದ ಸ್ಪರ್ಧೆ

CC 1
ವಿಜಯಪುರ ನಗರದ ಸೈನಿಕ ಶಾಲೆ ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಶಾಲೆಯ ರಾಷ್ಟ್ರಕೂಟ ಹೌಸ್‌ನ ವಿದ್ಯಾರ್ಥಿಗಳು ಹಿರಿಯ ಮತ್ತು ಕಿರಿಯರ ವಿಭಾಗದಲ್ಲಿ ಚಾಂಪಿಯನ್‌ಷಿಪ್ ಟ್ರೋಫಿಯನ್ನು ಪಡೆದರು. ಪ್ರಾಚಾರ್ಯೆ ಪ್ರತಿಭಾ ಬಿಷ್ಟ, ಉಪ ಪ್ರಾಚಾರ್ಯೆ ಸುರುಚಿ ಗೌರ, ಆಡಳಿತಾಧಿಕಾರಿ ಆಕಾಶ ಪತ್ಸ , ಡಾ.ರಾಮರಾವ್ ಇದ್ದರು.
Published on

ವಿಜಯಪುರ : ನಗರದ ಸೈನಿಕ ಶಾಲೆ ಮೈದಾನದಲ್ಲಿ ಶನಿವಾರ ಶಾಲೆಯ ವಿದ್ಯಾರ್ಥಿಗಳಿಗಾಗಿ ಗುಡ್ಡಗಾಡು ಓಟದ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಯಿತು.

ಶಾಲೆಯ ಪ್ರಾಚಾರ್ಯೆ ಪ್ರತಿಭಾ ಬಿಷ್ಟ ಚಾಲನೆ ನೀಡಿದರು. ಈ ಓಟದಲ್ಲಿ ಶಾಲೆಯ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು. ಕಿರಿಯರಿಗಾಗಿ 5 ಕಿ.ಮೀ. ಓಟ, ಹಿರಿಯ ವಿದ್ಯಾರ್ಥಿಗಳಿಗೆ 7 ಕಿ.ಮೀ. ಓಟದ ಸ್ಪರ್ಧೆ ಏರ್ಪಡಿಸಲಾಗಿತ್ತು.
ಕ್ರೀಡಾಕೂಟದಲ್ಲಿ ಹಿರಿಯರ ವಿಭಾಗದಲ್ಲಿ ಅಶ್ವಥ್ ಗೋದಿನಾಳ ಪ್ರಥಮ, ಪ್ರಶಾಂತ್ ದೇವಣಗಾಂವ ದ್ವಿತೀಯ ಸ್ಥಾನ ಗಳಿಸಿದರು. ಕಿರಿಯರ ವಿಭಾಗದಲ್ಲಿ ಸಿದ್ಧಾರ್ಥ ಕರಂಡೆ ಪ್ರಥಮ, ಋತ್ವಿಕ ಎ. ದ್ವಿತೀಯ ಸ್ಥಾನ ಪಡೆದರು. ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ರಾಷ್ಟ್ರಕೂಟ ಹೌಸ್ ಹಿರಿಯ ಮತ್ತು ಕಿರಿಯರ ವಿಭಾಗದಲ್ಲಿ ಚಾಂಪಿಯನ್‌ಷಿಪ್ ಟ್ರೋಫಿಯನ್ನು ಪಡೆದರು.

ಶಾಲೆಯ ಪ್ರಾಚಾರ್ಯೆ ವಿಜೇತ ವಿದ್ಯಾರ್ಥಿಗಳಿಗೆ ಪಾರಿತೋಷಕಗಳನ್ನು ವಿತರಿಸಿ, ಇಂತಹಾ ಕ್ರೀಡಾಕೂಟಗಳು ನಮ್ಮ ಮೈಮನಗಳನ್ನು ಗಟ್ಟಿ ಮಾಡುತ್ತವೆ ಎಂದು ಹೇಳಿದರು.

ಶಾಲೆಯ ಉಪ ಪ್ರಾಚಾರ್ಯೆ ಸುರುಚಿ ಗೌರ, ಆಡಳಿತಾಧಿಕಾರಿ ಆಕಾಶ ಪತ್ಸ , ಡಾ.ರಾಮರಾವ್, ಶಾಲೆಯ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net