ನಡುಗುಡ್ಡೆಯಲ್ಲಿ ಮನೆ ಮೇಲೆ ಗುಡ್ಡ ಕುಸಿತ

gudda
ಮನೆ ಮೇಲೆ ಗುಡ್ಡೆ ಕುಸಿದು ಹಾನಿಯಾಗಿರುವುದು.
Published on

ಗುರುಪುರ: ಶುಕ್ರವಾರ ರಾತ್ರಿಯಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಗುರುಪುರ ಪಂಚಾಯಿತಿ ವ್ಯಾಪ್ತಿಯ ಮೂಳೂರು ಗ್ರಾಮದ ನಡುಗುಡ್ಡೆ ಎಂಬಲ್ಲಿ ದಿ.ಕಾವೇರಿ ಪೂಜಾರ್ತಿ ಎಂಬುವರ ನೂತನ ಮನೆಗೆ ಗುಡ್ಡೆ ಕುಸಿದು ಹಾನಿಯಾಗಿದೆ.

ಗುಡ್ಡದ ಮೇಲಿನ ಕಾಂಕ್ರೀಟ್ ರಸ್ತೆ ಬದಿ ಗುಡ್ಡೆಯ ಮಣ್ಣು ಮನೆಗೆ ಬಿದ್ದಿದೆ. ಮನೆ ಪಕ್ಕದಲ್ಲಿ ಗುಡ್ಡ ಇನ್ನಷ್ಟು ಬಿರುಕು ಬಿಟ್ಟಿದ್ದು, ರಸ್ತೆ ಮತ್ತು ಮನೆಗೆ ಹೆಚ್ಚಿನ ಹಾನಿ ಸಾಧ್ಯತೆ ಇದೆ.

ಮೂರು ವರ್ಷದ ಹಿಂದಿನಿಂದಲೂ ಗುಡ್ಡ ಕುಸಿದ ಬಗ್ಗೆ ಪಂಚಾಯಿತಿಗೆ ದೂರು ನೀಡುತ್ತ ಬಂದಿದ್ದೇನೆ. ಈವರೆಗೆ ಯಾರೂ ಇತ್ತ ಗಮನಹರಿಸಿಲ್ಲ. ರಸ್ತೆಗೆ ಸೂಕ್ತ ಚರಂಡಿ ಇಲ್ಲ. ಮಳೆನೀರು ರಸ್ತೆಯಲ್ಲಿ ಹರಿದು ಇಳಿಜಾರು ಪ್ರದೇಶದಲ್ಲಿರುವ ನಮ್ಮ ಮನೆಯಂಗಳ ಸೇರುತ್ತದೆ. ಹಗಲಲ್ಲಿ ಗುಡ್ಡ ಕುಸಿಯುತ್ತಿದ್ದರೆ ಅಂಗಳದಲ್ಲಿ ಆಟವಾಡುತ್ತಿದ್ದ ಮಕ್ಕಳಿಗೆ ಅಪಾಯ ಉಂಟಾಗುತ್ತಿತ್ತು ಎಂದು ಮನೆ ಯಜಮಾನ ರಘುವೀರ ಪೂಜಾರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net