ಬೆಟ್ಟ ಜಾಗೃತಿ ಅಭಿಯಾನ 9ರಂದು

seminar
Published on

ಸಿದ್ದಾಪುರ: ಪಟ್ಟಣದ ಟಿಎಂಎಸ್ ಸಭಾಭವನದಲ್ಲಿ ಬೆಟ್ಟ ಜಾಗೃತಿ ಅಭಿಯಾನ ಜು. 9ರಂದು ಮಧ್ಯಾಹ್ನ 3.30ಕ್ಕೆ ಟಿಎಂಎಸ್ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ರಾಜ್ಯ ಜೀವ ವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಪರಿಸರ ತಜ್ಞ ಡಾ. ಕೇಶವ ಎಚ್. ಕೊರ್ಸೆ, ಅಡಕೆ ಟಾಸ್ಕ್ ಫೋರ್ಸನ ಮಾಜಿ ಸದಸ್ಯ ಜಿ.ಆರ್. ಹೆಗಡೆ ಬೆಳ್ಳೆಕೇರಿ, ಬೆಟ್ಟ ಕಾನೂನು ಅಧ್ಯಯನಕಾರ ನರೇಂದ್ರ ಹೊಂಡಗಾಶಿ, ಜಿಲ್ಲಾ ಸಾವಯವ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ವಿಶ್ವೇಶ್ವರ ಭಟ್ಟ ಇತರರು ವಿಶೇಷ ಮಾಹಿತಿ ನೀಡಲಿದ್ದಾರೆ.

ಜಿಲ್ಲೆಯಲ್ಲಿ ಅಡಕೆ ಬೆಳೆಗಾರರಿಗೆ ಸ್ವಾತ್ರಂತ್ರ್ಯ ಪೂರ್ವದಿಂದ ನೀಡಲಾದ ಕೆನರಾ ಪ್ರವಿಲೆಜ್ ಬೆಟ್ಟ ಸೌಲಭ್ಯ ಮುಂದುವರಿಸುವುದು, ಬೆಟ್ಟ ಭೂಮಿಯನ್ನು ‘ಬ’ ಖರಾಬ ವ್ಯಾಪ್ತಿಗೆ ಸೇರ್ಪಡೆ ಮಾಡಿದ್ದಕ್ಕೆ ವಿರೋಧ, ಬೆಟ್ಟ ಅಭಿವೃದ್ಧಿ ಯೋಜನೆ ಜಾರಿ ಮಾಡುವುದು, ಬೆಟ್ಟ ವನೀಕರಣ, ಬೆಟ್ಟ ಜೀವ ವೈವಿಧ್ಯ ಸಂವರ್ಧನೆ ಹೀಗೆ ಹಲವು ಮಹತ್ವದ ವಿಷಯಗಳ ಬಗ್ಗೆ ಸಮಾಲೋಚನೆ ನಡೆಸುವ ಉದ್ದೇಶವಿದೆ. ಜು. 9ರಂದು ಬೆಳಗ್ಗೆ 10 ಗಂಟೆಗೆ ತ್ಯಾಗಲಿ ಸಹಕಾರಿ ಸಂಘ ಹಾಗೂ 11.30ಕ್ಕೆ ಹಾರ್ಸಿಕಟ್ಟಾ ಸಹಕಾರಿ ಸಂಘದಲ್ಲಿ ಬೆಟ್ಟ ಜಾಗೃತಿ ಅಭಿಯಾನ ಸಭೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net