

ಕನಕಗಿರಿ: ಶ್ರಾವಣ ಮಾಸದ ನಿಮಿತ್ತ ತಾಲೂಕಿನ ಬೈಲಕ್ಕುಂಪುರ ಗ್ರಾಮದ ಶ್ರೀ ವರಗುರು ಕಾರ್ಯಸಿದ್ಧಿ ಶ್ರೀ ವೀರಾಂಜನೇಯ ಸ್ವಾಮಿ ಭಜನಾ ತಂಡದಿಂದ ಕಂಪ್ಲಿಯ ಹೇರೂರು ವಿರುಪಣ್ಣ ತಾತನ ಮಠಕ್ಕೆ ಭಾನುವಾರ ಪಾದಯಾತ್ರೆ ಆರಂಭಿಸಿದರು.
ಇದನ್ನೂ ಓದಿ:ಮುಂದಿನ ದಿನಗಳಲ್ಲಿ ಬಸವಕಲ್ಯಾಣದಿಂದ ಪಾದಯಾತ್ರೆ
ಮಳೆ, ಬೆಳೆ, ರೈತರಿಗೆ ಸುಖ ಸಮೃದ್ಧಿ ನೀಡಲೆಂದು ಗ್ರಾಮಸ್ಥರು 30 ವರ್ಷಗಳಿಂದಲೂ ಭಜನೆಯ ಮೂಲಕ ಪಾದಯಾತ್ರೆ ಕೈಗೊಳ್ಳುತ್ತಿದ್ದಾರೆ. 20ಕ್ಕೂ ಹೆಚ್ಚು ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡು ಒಂದೇ ದಿನದಲ್ಲಿ ಕಂಪ್ಲಿ ತಲುಪುತ್ತೇವೆ ಎಂದು ಪಾದಯಾತ್ರಿಗಳು ತಿಳಿಸಿದರು.
ಪ್ರಮುಖರಾದ ಕರಿಯಪ್ಪ, ವಿರುಪಣ್ಣ ತುರ್ವಿಹಾಳ, ದುರುಗಣ್ಣ ಗುರಿಕಾರ, ವಿರುಪಣ್ಣ ಗುರಿಕಾರ್, ವಿರುಪಣ್ಣ ಬಳ್ಳೊಳ್ಳಿ, ಮಾರುತಿ, ಯಮನೂರಪ್ಪ, ಮಹೇಶ, ವಿರುಪಣ್ಣ ಘರ್ಜಿನಾಳ, ಹನುಮೇಶ್ ಇತರರಿದ್ದರು.