ಕುಡಿವ ನೀರಿನ ಸಮಸ್ಯೆ ನಿವಾರಣೆಗೆ ಪಾದಯಾತ್ರೆ

MDL pc
ಎಸ್.ಎ.ನಯೀಮ್
Published on

ಮುದಗಲ್: ಪಟ್ಟಣದಲ್ಲಿ ಕುಡಿವ ನೀರಿನ ಸಮಸ್ಯೆ ನಿವಾರಣೆ, ತಾಲೂಕು ಕೇಂದ್ರದ ಘೋಷಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕಗೆ ಆಗ್ರಹಿಸಿ ಆ.5ರಿಂದ ಎರಡು ದಿನ ಹಟ್ಟಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಕರವೇ ಸ್ಥಳೀಯ ಘಟದ ಅಧ್ಯಕ್ಷ ಎಸ್.ಎ. ನಯೀಮ್ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಟ್ಟಿಗೆ ಆ.6ರಂದು ಸಿಎಂ ಸಿದ್ದರಾಮಯ್ಯ ಅವರು ವಿವಿಧ ಕಾಮಗಾರಿಗಳ ಶಂಕುಸ್ಥಾಪನೆಗೆ ಆಗಮಿಸಲಿದ್ದು, ಬಹುದಿನಗಳ ಬೇಡಿಕೆಯಾದ ಮುದಗಲ್ ತಾಲೂಕು ಕೇಂದ್ರ ಘೋಷಣೆ, ಕೋಟೆ ಉತ್ಸವದ ಆಚರಣೆ, ಕುಡಿವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕೆಂದು ಮನವಿ ಸಲ್ಲಿಸಲಾಗುವುದು.

ಬೇಡಿಕೆ ಈಡೇರಿಸದಿದ್ದರೆ ಅನಿರ್ದಿಷ್ಟಾವಧಿ ಮುಷ್ಕರ ಹಾಗೂ ನಿರಶನ ನಡೆಸಲಾಗುವುದು ಎಂದು ತಿಳಿಸಿದರು. ಕರವೇ ಗೌರವಾಧ್ಯಕ್ಷ ಸಂತೋಷ್ ಗಬ್ಬೂರು, ಸಂಚಾಲಕರಾದ ಶಾಲಂಬೇಗ್, ಕಾರ್ಯಧ್ಯಕ್ಷರಾದ ಎಸ್.ಎನ್, ಖಾದ್ರಿ, ಕಾರ್ಮಿಕ ಸಂಘಟನೆ ಅಧ್ಯಕ್ಷ ಸಾದಿಕ್ ಬೇಗ್, ಸಾಬುಹುಸೇನ್, ಮಹಾಂತೇಶ್ ಚೆಟ್ಟರ, ಹುಸೇನ್, ಯಂಕಪ್ಪ ಉಪ್ಪಾರ್, ಖಾನ್ ಸಾಬ್, ನಾಗರಾಜ ಭೋವಿ, ಅಬ್ದುಲ್ ಮಜೀದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net