ಹೈವೇನಲ್ಲಿ ಚಿಪ್ಪು ಹಂದಿಯ ಚಿಪ್ಪುಗಳ ಮಾರಾಟಕ್ಕೆ ಯತ್ನಿಸಿದ ಇಬ್ಬರ ಬಂಧನ

130820 Khanahosallli Shell Pig Sale Arrest
ಕಾನಹೊಸಹಳ್ಳಿಯಲ್ಲಿ ಚಿಪ್ಪು ಹಂದಿಯ ಚಿಪ್ಪುಗಳನ್ನು ಮಾರಾಟಕ್ಕೆ ಯತ್ನಿಸಿದ ಇಬ್ಬರನ್ನು ಬಂಧಿಸಿರುವುದು.
Published on

ಕಾನಹೊಸಹಳ್ಳಿ: ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಚಿಪ್ಪು ಹಂದಿಯ ಚಿಪ್ಪುಗಳನ್ನು ಮಾರಾಟಕ್ಕೆ ಮುಂದಾದ ಇಬ್ಬರನ್ನು ಗುಡೇಕೋಟೆ ಕರಡಿಧಾಮ ಅರಣ್ಯಾಧಿಕಾರಿಗಳು ಬುಧವಾರ ಬಂಧಿಸಿದ್ದಾರೆ.

ಕರಡಿಹಳ್ಳಿ ಗ್ರಾಮದ ಬಸವರಾಜ ಮತ್ತು ಕುಮಾರ್ ಬಂಧಿತರು. ಚಿಕ್ಕಮಗಳೂರು ಸಂಚಾರಿ ದಳದ ಮಾಹಿತಿ ಮೇರೆಗೆ ದಾಳಿ ಮಾಡಲಾಗಿದ್ದಾರೆ. ಬಂಧಿತರಿಂದ ಲಕ್ಷಕ್ಕೂ ಹೆಚ್ಚು ಮೌಲ್ಯದ 1.5 ಕೆಜಿ ಚಿಪ್ಪುಗಳನ್ನು ವಶಕ್ಕೆ ಪಡೆಯಲಾಗಿದೆ. ವನ್ಯಜೀವಿ ಸಂರಕ್ಷಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಗುಡೇಕೋಟೆ ಕರಡಿಧಾಮದ ಆರ್‌ಎಫ್‌ಒ ಬಿ.ಎಸ್.ಮಂಜುನಾಥ, ಉಪ ವಲಯ ಅರಣ್ಯಾಧಿಕಾರಿಗಳಾದ ಮಹೇಶ್, ಹೊನ್ನೂರಸ್ವಾಮಿ, ವೆಂಕಟೇಶ್ ನಾಯ್ಕ, ಗುರುಬಸವರಾಜ್, ವೆಂಕಟೇಶ್, ಪ್ರಶಾಂತ ಯಾದವ್ ಕಾರ್ಯಾಚರಣೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net