15 ನಿಮಿಷದಲ್ಲಿ ಮುಗಿದ ಪುರಸಭೆ ಮೊದಲ ಸಭೆ

Published on

ಶಿಕಾರಿಪುರ: ಪುರಸಭೆಯ ಮೊದಲ ಹಾಗೂ ತುರ್ತಸಭೆ ಬುಧವಾರ ಅಧ್ಯಕ್ಷೆ ಲ್ಷ್ಮ ಮಹಾಲಿಂಗಪ್ಪ ಅಧ್ಯಕ್ಷತೆಯಲ್ಲಿ ಕೇವಲ ಒಂದು ನಿರ್ಣಯ ಪಾಸು ಮಾಡಿ ಯಾವುದೇ ವಾದ-ವಿವಾದಗಳಿಲ್ಲದೆ 15 ನಿಮಿಷಗಳಲ್ಲಿ ಪೂರ್ಣಗೊಂಡಿತು.

ಮೊದಲ ಸಭೆಯಾದ್ದರಿಂದ ನೂತನವಾಗಿ ಆಯ್ಕೆಯಾದ ಸದಸ್ಯರು ಪ್ರಮಾಣವಚನ ಸ್ವೀಕರಿಸಿದರು. ನಂತರ ವಿಷಯ ಪ್ರಸ್ತಾಪಿಸಿದ ಅಧ್ಯಕ್ಷೆ ಲಕ್ಷ್ಮೀ ಮಹಾಲಿಂಗಪ್ಪ ಸವೋಚ್ಚ ನ್ಯಾಯಾಲಯದ ಆದೇಶದಂತೆ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗಳಿಗೆ ಹೊಂದಿಕೊಂಡ ದೇವಸ್ಥಾನಗಳನ್ನು ತೆರವುಗೊಳಿಸಬೇಕು. ಅದಕ್ಕಾಗಿ ತುರ್ತು ಸಭೆ ಕರೆಯಲಾಗಿದೆ. ಪಟ್ಟಣದಲ್ಲಿ ಅಂತಹ ದೇವಸ್ಥಾನಗಳು ಯಾವೂ ಹೆದ್ದಾರಿಗೆ ಹೊಂದಿಕೊಂಡಿಲ್ಲ. ಆದರೆ ಈಗಿರುವ ದೇವಾಲಯಗಳಿಂದ ಜನತೆಯ ಓಡಾಟಕ್ಕೆ ವಾಹನ ಸಂಚಾರಕ್ಕೆ ಯಾವುದೇ ರೀತಿಯ ತೊಂದರೆ ಆಗá-ವುದಿಲ್ಲ ಎಂದು ಹೇಳಿದರು.

ಸದಸ್ಯರಾದ ಪ್ರಶಾಂತ್ ಜೀನಳ್ಳಿ, ಪಾಲಾಕ್ಷಪ್ಪ ಮಾತನಾಡಿ, ಪಟ್ಟಣದಲ್ಲಿ ಅಂತಹ ದೇವಸ್ಥಾನಗಳಿಲ್ಲ. ಎಲ್ಲ ರಸ್ತೆ ಬಿಟ್ಟು ಇವೆ ಮತ್ತು ಆಯಾ ಕೇರಿಯಲ್ಲಿ ಇದ್ದರೂ ಯಾರಿಗೂ ತೊಂದರೆಯಾಗಿಲ್ಲ. ಇವುಗಳನ್ನು ಸಕ್ರಮಗೊಳಿಸಲು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿ ಠರಾವು ಪಾಸು ಮಾಡಬೇಕು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net