ಹೆದ್ದಾರಿ ಕೆಳ ಸೇತುವೆಯಲ್ಲಿನ ಕೊಳಚೆ ನೀರು ತೆರವು

6mkh1
Published on

ಎಂ.ಕೆ.ಹುಬ್ಬಳ್ಳಿ: ಇಲ್ಲಿನ ಪುಣೆ&ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಾದಚಾರಿ ಕೆಳ ಸೇತುವೆಗಳಲ್ಲಿ ಮಳೆಯಿಂದ ತುಂಬಿಕೊಂಡಿದ್ದ ಕೊಳಚೆ ನೀರನ್ನು ಹೆದ್ದಾರಿ ನಿರ್ವಹಣಾ ಕಂಪನಿ ಸಿಬ್ಬಂದಿ ಭಾನುವಾರ ಸ್ವಚ್ಛಗೊಳಿಸಿದರು.

ಕಳೆದ ಕೆಲ ದಿನಗಳಿಂದ ಪುಣೆ&ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಾದಚಾರಿ ಕೆಳ ಸೇತುವೆಗಳಲ್ಲಿ ಮಳೆಯಿಂದ ನೀರು ಸಂಗ್ರಹಣೆಗೊಂಡು ಅನಾರೋಗ್ಯಕರ ವಾತಾವರಣ ಸೃಷ್ಟಿಯಾಗುತ್ತಿರುವ ಬಗ್ಗೆ ಜು.6 ರಂದು "ಕೆಳ ಸೇತುವೆಗಳು ಕಳಾಹೀನ' ಎಂಬ ಶೀರ್ಷಿಕೆಯಡಿ ವಿಜಯವಾಣಿ ವಿಶೇಷ ವರದಿ ಪ್ರಕಟಿಸಿತ್ತು.

ವರದಿಯಿಂದ ಎಚ್ಚೆತ್ತ ಹೆದ್ದಾರಿ ನಿರ್ವಹಣಾ ಕಂಪನಿ, ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಕೆಳ ಸೇತುವೆಗಳಲ್ಲಿ ತುಂಬಿಕೊಂಡಿದ್ದ ಕೊಳಚೆ ನೀರನ್ನು ತೆರವುಗೊಳಿಸುವ ಮೂಲಕ ಸುಗಮ ಸಂಚಾರ ಹಾಗೂ ಆರೋಗ್ಯಕರ ವಾತಾವರಣ ನಿರ್ಮಾಣಕ್ಕೆ ಅನುಕೂಲ ಕಲ್ಪಿಸಿದ್ದಾರೆ. ವಿಜಯವಾಣಿ ಸಾಮಾಜಿಕ ಕಳಕಳಿಗೆ ಸ್ಥಳಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪುಣೆ&ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಾದಚಾರಿ ಕೆಳಸೇತುವೆಯಲ್ಲಿ ಮಳೆನೀರು ಸಂಗ್ರಹಗೊಳ್ಳದಂತೆ ಶಾಶ್ವತ ಪರಿಹಾರ ಒದಗಿಸಬೇಕು. ಸೇತುವೆ ಬಳಿಯ ಸರ್ವಿಸ್​ ರಸ್ತೆಗಳಲ್ಲಿನ ತಗ್ಗು&ಗುಂಡಿ ಮುಚ್ಚಿ, ಸಂಚಾರಕ್ಕೆ ಅನುಕೂಲ ಒದಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net