ಹೆದ್ದಾರಿ ತಗ್ಗುಗಳಲ್ಲಿ ಸಿಲುಕುತ್ತಿವೆ ವಾಹನಗಳು

31.ktal.01
Published on

ಕವಿತಾಳ: ಪಟ್ಟಣದಲ್ಲಿ ಶನಿವಾರ ಬೆಳಗ್ಗೆ ಸುರಿದ ಮಳೆಯಿಂದ ರಸ್ತೆಯಲ್ಲಿ ನೀರು ನಿಂತಿದ್ದು, ವಾಹನ ಸವಾರರು ತೀವ್ರ ಸಂಕಷ್ಟ ಎದುರಿಸಿದರು.

ಚರ್ಚ್‌ನಿಂದ ಸರ್ಕಾರಿ ಪ್ರೌಢಶಾಲೆವರೆಗೆ ರಸ್ತೆ ಪೂರ್ತಿ ಹದಗೆಟ್ಟಿದೆ. ಕಳೆದ ಕೆಲ ವರ್ಷದ ಹಿಂದೆ ಒಂದು ಕೋಟಿ ರೂಪಾಯಿ ವೆಚ್ಚದದಲ್ಲಿ ಕಳಪೆ ಹಾಗೂ ಅವೈಜ್ಞಾನಿಕವಾಗಿ ನಿರ್ಮಿಸಿದ ಡಿವೈಡರ್ ರಸ್ತೆ ಹದಗೆಡಲು ಕಾರಣವಾಗಿದೆ. ರಸ್ತೆ ವಿಸ್ತರಣೆ ಮಾಡದೆ ಡಿವೈಡರ್ ನಿರ್ಮಿಸಿರುವುದು ಸಮಸ್ಯೆಗೆ ಕಾರಣವಾಗಿದೆ.

ಕಿರಿದಾದ ರಸ್ತೆಯಲ್ಲಿ ಭಾರಿ ಚಲಿಸುತ್ತಿರುವ ವಾಹನಗಳು ತಗ್ಗುಗಳಲ್ಲಿ ಸಿಲುಕುತ್ತಿವೆ. ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ ಶಫಿಯುದ್ದೀನ್ ಅವರ ಕಾರು ಸಿಲುಕಿ ಮುಂದೆ ಸಾಗಲಿಲ್ಲ. ಸ್ಥಳೀಯರು ತಗ್ಗಿನಿಂದ ಕಾರನ್ನು ಮೇಲೆತ್ತಿದರು.

ಶನಿವಾರ ಕೂಡ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಮುಖ್ಯ ರಸ್ತೆ ಹದಗೆಟ್ಟಿದ್ದು ಕೆಲ ವಾಹನಗಳು ಸಂತೆ ಬಜಾರ್‌ನಿಂದ ವಾಹನ ಚಲಿಸುಕೊಂಡು ಹೋಗುತ್ತಿರುವದು ಕಂಡುಬಂತು. ಇದು ಬೆಳಗಾವಿ-ಹೈದರಾಬಾದ್ ಸಂಪರ್ಕಿಸುವ ರಾಜ್ಯ ಹೆದ್ದಾರಿಯಾಗಿದ್ದು, ಕೂಡಲೇ ದುರಸ್ತಿ ಮಾಡಬೇಕು ಎಂದು ನೀಲಕಂಠ ಭೋವಿ, ರಡ್ಡೆಪ್ಪ, ಪಪಂ ಸದಸ್ಯರಾದ ರಾಘವೇಂದ್ರ, ರಾಜಶೇಖರ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net