ಹೆದ್ದಾರಿಯಲ್ಲಿ ಹೆದರಿಸಿ ಮೊಬೈಲ್ ಕಿತ್ತುಕೊಂಡು ಹೋದ ದರೋಡೆಕೋರರು

Crime Logo
Published on

ಹಾವೇರಿ: ಹೆದ್ದಾರಿಯಲ್ಲಿ ಮೂತ್ರ ವಿಸರ್ಜನೆ ಮಾಡಲು ನಿಂತಿದ್ದ ಬೈಕ್ ಸವಾರರನ್ನು ಹೆದರಿಸಿ ಅವರ ಮೊಬೈಲ್‌ಗಳನ್ನು ಕಿತ್ತುಕೊಂಡು ಹೋದ ಘಟನೆ ನಗರದ ಎನ್‌ಎಚ್-48ರ ಹಾನಗಲ್ಲ ಸೇತುವೆ ಬಳಿ ಗುರುವಾರ ರಾತ್ರಿ ನಡೆದಿದೆ.
ರಟ್ಟಿಹಳ್ಳಿ ತಾಲೂಕಿನ ತಡಕನಹಳ್ಳಿಯ ಮಹದೇವಗೌಡ ಷಣ್ಮುಖಪ್ಪಗೌಡ (21) ಎಂಬುವರ ಮೊಬೈಲ್ ಕಿತ್ತುಕೊಂಡು ಹೋಗಿರುವುದು.
ಈತ ಹಾಗೂ ಈತನ ಸ್ನೇಹಿತ ಹೆದ್ದಾರಿ ಬಳಿ ಬೈಕ್ ನಿಲ್ಲಿಸಿ ಮೂತ್ರವಿಸರ್ಜನೆ ಮಾಡುತ್ತಿದ್ದ ಸಮಯದಲ್ಲಿ ಕಾರಿನಲ್ಲಿ ಬಂದ ಮೂವರು ಅಪರಿಚಿತರು ಅವರ ಮೇಲೆ ಹಲ್ಲೆ ಮಾಡಿ ಹಣ ಕೊಡಲು ಬೇಡಿಕೆ ಇಟ್ಟಿದ್ದಾರೆ. ಆದರೆ, ಅವರ ಬಳಿ ಹಣವಿಲ್ಲ ಎಂದು ತಿಳಿದು ಎರಡು ಮೊಬೈಲ್‌ಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net