

ಮಡಿಕೇರಿ:
ಮೈಸೂರು-ಕುಶಾಲನಗರ ಚತುಷ್ಪಥ ಹೆದ್ದಾರಿಯ ಕಾಮಗಾರಿ ಈ ಏಪ್ರಿಲ್‌ನಿಂದ ಶುರುವಾಗಿ. ಕೊಡಗು-ಮೈಸೂರು ಮಾಜಿ ಸಂಸದ ಪ್ರತಾಪ್ ಸಿಂಹ ಸಾಮಾಜಿಕ ಜಾಲತಾಣಗಳಲ್ಲಿ ಈ ಮಾಹಿತಿ ಹಂಚಿಕೊAಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವÀ ನಿತಿನ್ ಗಡ್ಕರಿ ಆಶೀರ್ವಾದದಿಂದ ಈ ಯೋಜನೆಗೆ 2018ರಲ್ಲೇ ಅನುಮೋದನೆ ಪಡೆದುಕೊಳ್ಳಲಾಗಿತ್ತು. 2023ರ ಮಾ. 12ರಂದು ಬೆಂಗಳೂರು -ಮೈಸೂರು ಹೈವೇ ಉದ್ಘಾಟನೆ ದಿನವೇ ಗೆಜ್ಜಲಗೆರೆಯಲ್ಲಿ ಪ್ರದಾನಿ ನರೇಂದ್ರ ಮೋದಿ ಈ ಯೋಜನೆಗೆ ಭೂಮಿ ಪೂಜೆ ಮಾಡಿದ್ದರು.
ಒಟ್ಟು 92 ಕಿಮೀ ಹೆದ್ದಾರಿ ನಿರ್ಮಾಣ ಕಾಮಗಾರಿಯಲ್ಲಿ 4 ಪ್ಯಾಕೇಜ್‌ಗಳಿದೆ. ಪ್ಯಾಕೇಜ್ 4 ಅಂದರೆ ಬಿ ಅಗ್ರಹಾರ(ಶ್ರೀರಂಗಪಟ್ಟಣ)ದಿAದ ಯಲಚನಹಳ್ಳಿ (ಮೈಸೂರು ತಾಲೂಕು) 19 ಕಿಮೀ ಮತ್ತು ಪ್ಯಾಕೇಜ್-3 ಹುಣಸೂರು ತಾಲೂಕಿನ ಬೆಳತ್ತೂರುನಿಂದ ಪಿರಿಯಾಪಟ್ಟಣ ತಾಲೂಕಿನ ಹರವೆ ಮಲ್ಲಿರಾಜಪಟ್ಟಣವರೆಗಿನ 24.10 ಕಿಮೀ ಕಾಮಗಾರಿ ವೇಗವಾಗಿ ನಡೆಯುತ್ತಿದೆ.
ಪ್ಯಾಕೇಜ್-4 ಸದ್ಯದಲ್ಲೇ ಆರಂಭವಾಗಲಿದ್ದು, ಪ್ಯಾಕೇಜ್-2 ಅರಣ್ಯ ಇಲಾಖೆಯ ಕೃಪೆಗಾಗಿ ಕಾದಿದೆ. ಕುಶಾಲನಗರದಿಂದ ಮಡಿಕೇರಿ ಕಡೆಗೆ ಆರಂಭವಾಗಬೇಕಿರುವ 22 ಕಿಮೀ ಉದ್ಧದ ಪ್ಯಾಕೇಜ್-1 ಅನ್ನು ಪರಿಸರವಾದಿಗಳ ತಕರಾರು ಮತ್ತು ಹೈಕೋರ್ಟ್ ಕೇಸಿನಿಂದಾಗಿ ಕೈಬಿಟ್ಟು ಕುಶಾಲನಗರದವರೆಗೂ ಮಾತ್ರ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಎಲ್ಲರೂ ಒಪ್ಪಿಗೆ ಕೊಟ್ಟರೆ ಪ್ಯಾಕೇಜ್-1 ಕ್ಕೆ ಅನುಮೋದನೆ ಪಡೆಯುವ ಪ್ರಯತ್ನ ಆರಂಭಿಸಲಾಗುವುದು. ಕೆಲವು ಕೆಲಸ ಮಾಡಲು ಅಧಿಕಾರವೇ ಬೇಕೆಂದಿಲ್ಲ, ನಿಮ್ಮ ಆಶೀರ್ವಾದವೂ ಸಾಕಾಗುತ್ತದೆ ಎಂದು ಪ್ರತಾಪ್ ಸಿಂಹ ಹೇಳಿಕೊಂಡಿದ್ದಾರೆ. ಕಾಮಗಾರಿ ಇದೇ ವೇಗದಲ್ಲಿ ನಡೆದರೆ 2017ರ ಜೂನ್ ವೇಳೆಗೆ ಸಾರ್ವಜನಿಕರ ಬಳಕೆಗೆ ಲಭ್ಯವಾಗುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.