

ಮಡಿಕೇರಿ:
ಮೈಸೂರು - ಕುಶಾಲನಗರ ಚತುಷ್ಪಥ ರಸ್ತೆಯ ಪ್ಯಾಕೇಜ್ 3ಕ್ಕೆ ಈಗ ಅಂತಿಮ ಅನುಮೋದನೆ ಸಿಕ್ಕಿರುವುದರಿಂದ ಕಾಮಗಾರಿ ಚುರುಕುಗೊಳ್ಳುವ ಸಾಧ್ಯತೆ ಇದೆ. ಬಹು ನಿರೀಕ್ಷಿತ ಈ ಹೆದ್ದಾರಿ 2027ರ ಜೂನ್ ಒಳಗೆ ಸಾರ್ವಜನಿಕ ಬಳಕೆಗೆ ಲಭ್ಯವಾಗಿಸುವ ಗುರಿ ಇಟ್ಟುಕೊಳ್ಳಲಾಗಿದ್ದು, ಭೂ ಸ್ವಾದೀನ ಪ್ರಕ್ರಿಯೆ ಬಹುತೇಕ ಪೂರ್ಣವಾಗುತ್ತಾ ಬಂದಿದೆ. ಸಂಸದ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಕೂಡ ಈ ಸಂಬAಧ ವಿಶೇಷ ಆಸಕ್ತಿ ತೋರಿಸುತ್ತಿದ್ದಾರೆ.
ಉz್ದೆÃಶಿತ ಮೈಸೂರು-ಮಡಿಕೇರಿ 4 ಪಥದ ಎಕ್ಸ್ಪ್ರೆಸ್‌ವೇ ಕಾಮಗಾರಿ ಮೊದಲ ಹಂತದಲ್ಲಿ ಕುಶಾಲನಗರದ ಬಸವನಹಳ್ಳಿ ತನಕ ನಡೆಯಲಿದೆ. ಈ ಕಾಮಗಾರಿಯನ್ನು ಶ್ರೀರಂಗಪಟ್ಟಣ-ಹುಣಸೂರು, ಹುಣಸೂರು-ಪಿರಿಯಾಪಟ್ಟಣ ಹಾಗೂ ಪಿರಿಯಾಪಟ್ಟಣ-ಕುಶಾಲನಗರ ಸೇರಿದಂತೆ ವಿವಿಧ ಪ್ಯಾಕೇಜ್‌ಗಳಲ್ಲಿ ನಡೆಸುವ ಯೋಜನೆ ಸಿದ್ಧವಾಗಿದೆ. ಆದರೆ ಪ್ಯಾಕೇಜ್ 3ರಲ್ಲಿ ಬರುವ ಹುಣಸೂರಿನಿಂದ ಪಿರಿಯಾಪಟ್ಟಣವರೆಗಿನ ಕಾಮಗಾರಿ ಆರಂಭದ ಪ್ರಸ್ತಾವನೆಗೆ ಕೇಂದ್ರ ಸರ್ಕಾರದ ಅನುಮೋದನೆಗಾಗಿ ಕಾಯಲಾಗುತ್ತಿತ್ತು. ಇದೀಗ ಈ ಅಡ್ಡಿಯೂ ನಿವಾರಣೆ ಆಗಿದ್ದು, ಈ ಪ್ರಸ್ತಾವನೆಯನ್ನು ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರಿದ ಪ್ರಧಾನ ಕಚೇರಿ ಅನುಮೋದಿಸಿದೆ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾಹಿತಿ ನೀಡಿದ್ದಾರೆ.
ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರ ಪ್ಯಾಕೇಜ್ 3ರ ಕಾಮಗಾರಿಗೆ ಅನುಮೋದನೆ ಕೊಟ್ಟಿರುವುದರಿಂದ ಮೈಸೂರು - ಕುಶಾಲನಗರ ಚತುಷ್ಪಥ ರಸ್ತೆಯ ನಿರ್ಮಾಣ ಪ್ರಕ್ರಿಯೆಗೆ ವೇಗ ಸಿಗುವ ಸಾಧ್ಯತೆ ಇದೆ. ಏ. 2ನೇ ವಾರದೊಳಗೆ ನಿರ್ಮಾಣ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಸಂಸದ ಯದುವೀರ್ ಕೂಡ ಪ್ರಕಟಿಸಿದ್ದಾರೆ. "ನಮಗೆ ಅಂತಿಮ ಅನುಮೋದನೆ ದೊರೆತಿದ್ದು, ಎರಡು ವಾರಗಳಲ್ಲಿ ಕೆಲಸ ಪ್ರಾರಂಭಿಸಲಿದ್ದೇವೆ ಎಂದು ನನಗೆ ಸಂತೋಷವಾಗಿದೆ. ಯೋಜನೆ ಬಹಳ ಸಮಯದಿಂದ ಸ್ಥಗಿತಗೊಂಡಿತ್ತು, ಮತ್ತು ಯೋಜನೆಗೆ ಅಂತಿಮ ಅನುಮೋದನೆ ನೀಡಲು ಮತ್ತು ದಾರಿಯಲ್ಲಿರುವ ಎಲ್ಲಾ ಅಡೆತಡೆಗಳನ್ನು ನಿವಾರಿಸಲು ನನಗೆ ಸಂತೋಷವಾಗಿದೆ.'' ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಯದುವೀರ್ ಬರೆದುಕೊಂಡಿದ್ದಾರೆ.
ಈ ಸಂಬAಧ ಈ ಹಿಂದೆಯೇ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ್ದ ಯದುವೀರ್ ಮೈಸೂರು - ಕುಶಾಲನಗರ ಚತುಷ್ಪಥ ರಸ್ತೆ ನಿರ್ಮಾಣ ಯೋಜನೆಯ ವಿವರಗಳು ಮತ್ತು ಯೋಜನೆಗೆ ಸಂಬAಧಿಸಿದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ್ದರು. ಇದರಿಂದಾಗಿ ಕಾಮಗಾರಿ ಆರಂಭದಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಸಚಿವರ ಗಮನ ಸೆಳೆದಿದ್ದರು. ಈ ವೇಳೆ ಪ್ರತಿಕ್ರಿಯಿಸಿದ್ದ ಸಚಿವರು, ಶೀಘ್ರದಲ್ಲೇ ಕಡತಗಳನ್ನು ವಿಲೆವಾರಿ ಕೆಲಸಕ್ಕೆ ಅಂತಿಮ ಅನುಮೋದನೆ ನೀಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಈಗ ಅಂತಿಮ ಅನುಮೋದನೆ ಸಿಕ್ಕಿದೆ.
ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ ವೇ ಉದ್ಘಾಟನೆ ಸಂದರ್ಭದಲ್ಲೇ 92 ಕಿಮೀ ಉದ್ದದ 4,130 ಕೋಟಿ ರೂ. ವೆಚ್ಚದ ಮೈಸೂರು-ಮಡಿಕೇರಿ 4 ಪಥದ ಎಕ್ಸ್ಪ್ರೆಸ್‌ವೇ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ 2023ರ ಮಾರ್ಚ್ 12ರಂದು ಶಂಕುಸ್ಥಾಪನೆ ನೆರವೇರಿಸಿದ್ದರು. ನಂತರದ ದಿನಗಳಲ್ಲಿ ಕಾಮಗಾರಿಗೆ ಸಂಬAಧಿಸಿದ ಟೆಂಡರ್ ಪ್ರಕ್ರಿಯೆಯೂ ಪೂರ್ಣಗೊಂಡಿದ್ದು, ಗುತ್ತಿಗೆದಾರರನ್ನು ಕೂಡ ನಿಗದಿ ಮಾಡಲಾಗಿದೆ. ಮೈಸೂರು-ಮಡಿಕೇರಿ 4 ಪಥದ ಎಕ್ಸ್ಪ್ರೆಸ್‌ವೇ ಮೈಸೂರು, ಬೆಂಗಳೂರು ಎಕ್ಸ್ಪ್ರೆಸ್‌ವೇಗೆ ಸಂಪರ್ಕ ಕಲ್ಪಿಸುತ್ತದೆ.
ಉದ್ದೇಶಿತ ಈ ಹೆದ್ದಾರಿ ನಾಲ್ಕು ಪಥದ ಜತೆಗೆ ಸರ್ವೀಸ್ ರಸ್ತೆಗಳನ್ನೂ ಹೊಂದಿರುತ್ತದೆ. ಈ ಯೋಜನೆಗಾಗಿ 1,351.67 ಎಕರೆ ಭೂಮಿ ಬೇಕಾಗುತ್ತದೆ. ಶ್ರೀರಂಗಪಟ್ಟಣ, ಮೈಸೂರು, ಪಿರಿಯಾಪಟ್ಟಣ, ಕುಶಾಲನಗರ ತಾಲೂಕಿನ ರೈತರು ಈ ಯೋಜನೆಗಾಗಿ ಭೂಮಿ ಕಳೆದುಕೊಳ್ಳುತ್ತಿದ್ದಾರೆ. ಭೂ ಮಾಲೀಕರಿಗೆ ಭೂಸ್ವಾಧೀನ ನಿಯಮಾವಳಿಗಳ ಪ್ರಕಾರ ಮಾರುಕಟ್ಟೆ ದರಕ್ಕಿಂತಲೂ ಹೆಚ್ಚಿನ ಬೆಲೆಯನ್ನು ಪರಿಹಾರವಾಗಿ ಕೊಡಲಾಗುತ್ತಿದೆ. 4,130 ಕೋಟಿ ರೂ. ಯೋಜನಾ ವೆಚ್ಚದಲ್ಲಿ ಭೂ ಸ್ವಾಧೀನ ಪರಿಹಾರಕ್ಕೆಂದು 1,100 ಕೋಟಿ ರೂ. ಮೀಸಲಿಡಲಾಗಿದೆ.
ಮೈಸೂರು-ಕುಶಾಲನಗರ ಚತುಷ್ಪಥ ಹೆದ್ದಾರಿ ಕಾಮಗಾರಿ ಪ್ರಾರಂಭಕ್ಕೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆ ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದೆ. 2ನೇ ಹಂತದ ಕಾಮಗಾರಿಗೆ ಶೇ.84, 3ನೇ ಹಂತದ ಕಾಮಗಾರಿಗೆ ಶೇ.80, 4ನೇ ಹಂತದ ಕಾಮಗಾರಿಗೆ ಶೇ.70 ಹಾಗೂ 5ನೇ ಹಂತದ ಕಾಮಗಾರಿಗೆ ಶೇ.84 ರಷ್ಟು ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಪಿರಿಯಾಪಟ್ಟಣ ಮತ್ತು ಕುಶಾಲನಗರ ನಡುವಿನ ರಸ್ತೆ ಅಗಲೀಕರಣ ಚಟುವಟಿಕೆಗಳಿಗೆ ಅರಣ್ಯ ಇಲಾಖೆಯಿಂದ ಅನುಮತಿ ಇನ್ನಷ್ಟೇ ಸಿಗಬೇಕಿದೆ ಎಂದು ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರದ ಮೂಲಗಳು ತಿಳಿಸಿವೆ.
ಚತುಷ್ಪಥ ರಸ್ತೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಪಾಲಹಳ್ಳಿಯಿಂದ ಶುರುವಾಗಲಿದೆ. ಇದು ಕೊಡಗು ಜಿಲ್ಲೆಯಲ್ಲಿ 2.3 ಕಿ. ಮೀ. ಹಾದುಹೋಗಲಿದ್ದು, ಮೈಸೂರು ಜಿಲ್ಲೆಯಲ್ಲಿ ಅತ್ಯಧಿಕ ಎಂದರೆ 75.9 ಕಿ. ಮೀ. ಹಾಗೂ ಮಂಡ್ಯ ಜಿಲ್ಲೆಯಲ್ಲಿ 14 ಕಿ.ಮೀ. ದೂರ ಇರಲಿದೆ. ಈ ಹೆದ್ದಾರಿ ಯೋಜನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ಮತ್ತು ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನಲ್ಲಿ 135 ಎಕರೆ ಅರಣ್ಯ ಭೂಮಿ ಮೂಲಕವೂ ಸಾಗಲಿದೆ. ಕೊಡಗು ಭಾಗದಲ್ಲಿ 1 ಹಳ್ಳಿಯ 50 ಕುಟುಂಬಗಳು ಈ ಕಾಮಗಾರಿಯ ಪ್ರಭಾವಕ್ಕೆ ಒಳಗಾಗಲಿವೆ. 25 ಕಟ್ಟಡಗಳು ಅಥವಾ ಆಸ್ತಿಪಾಸ್ತಿಗಳನ್ನು ಇದಕ್ಕಾಗು ಕಳೆದುಕೊಳ್ಳಬೇಕಾಗಿದೆ.
ನಿರೀಕ್ಷೆ ಹುಟ್ಟಿಸಿರುವ ಹೆದ್ದಾರಿ
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್‌ವೇ ಸಂಚಾರಕ್ಕೆ ಲಭ್ಯವಾದ ನಂತರ ರಾಷ್ಟಿçÃಯ ಹೆದ್ದಾರಿ 275ರ ಮೈಸೂರು-ಮಡಿಕೇರಿ ಮಾರ್ಗದಲ್ಲಿ ವಾಹನಗಳ ಸಂಚಾರ ಹೆಚ್ಚಾಗಿದೆ. ಅಲ್ಲದೆ ರಾಜ್ಯ ರಾಜಧಾನಿಗೆ ಕೊಡಗು ತುಂಬಾ ಹತ್ತಿರ ಎನ್ನುವಂತಾಗಿದ್ದು, ಬೆಂಗಳೂರು ಸಮೀಪದ ಒಂದು ದಿನದ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಮಡಿಕೇರಿಯೂ ಸ್ಥಾನ ಪಡೆದುಕೊಂಡಿದೆ. ಹಾಗಾಗಿ ವಾರಾಂತ್ಯ ದಿನಗಳು ಮತ್ತು ರಜೆಯ ದಿನಗಳಲ್ಲಿ ಮೈಸೂರು-ಮಡಿಕೇರಿ ಹೆದ್ದಾರಿಯಲ್ಲಿ ವಾಹನಗಳ ದಟ್ಟಣೆ ಅಧಿಕವಾಗಿದೆ. ಪ್ರತಿನಿತ್ಯವೂ ಇಲ್ಲಿ ಅಪಘಾತಗಳ ವರದಿ ಆಗುತ್ತಲೇ ಇರುತ್ತದೆ. ಈ ಹಿನ್ನೆಲೆಯಲ್ಲಿ ಈ ಹೆದ್ದಾರಿ ಮೇಲ್ದರ್ಜೆಗೆ ಏರುವ ತುರ್ತು ಅಗತ್ಯ ಇರುವುದರಿಂದ ಉದ್ದೇಶಿತ ಮೈಸೂರು-ಮಡಿಕೇರಿ 4 ಪಥದ ಎಕ್ಸ್ಪ್ರೆಸ್‌ವೇ ಯೋಜನೆ ಸಾರ್ವಜನಿಕರಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.
ರಾಜಧಾನಿಗೆ ಸುಲಭ ಸಂಪರ್ಕ
ಮೈಸೂರು-ಮಡಿಕೇರಿ 4 ಪಥದ ಎಕ್ಸ್ಪ್ರೆಸ್‌ವೇ ಯೋಜನೆ ಕಾರ್ಯರೂಪಕ್ಕೆ ಬಂದ ನಂತರ ಮಡಿಕೇರಿಯಿಂದ ಮೈಸೂರು ನಗರಕ್ಕೆ ಸಂಪರ್ಕ ಕಲ್ಪಿಸದೆಯೇ ನೇರವಾಗಿ ಶ್ರೀರಂಗಪಟ್ಟಣ ಸಮೀಪದ ಬೊಮ್ಮೂರು ಅಗ್ರಹಾರ ಬಳಿ ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ ವೇ ಸೇರಬಹುದಾಗಿದೆ. ಇದರಿಂದಾಗಿ ಮಡಿಕೇರಿಯಿಂದ ಬೆಂಗಳೂರಿಗೆ ಯಾವುದೇ ಅಡೆ-ತಡೆಯಿಲ್ಲದೇ ವಾಹನ ಸಂಚಾರ ಸಾಧ್ಯವಾಗಲಿದೆ. ಸುಂಟಿಕೊಪ್ಪ, ಕುಶಾಲನಗರ, ಬೈಲಕುಪ್ಪೆ, ಕೊಪ್ಪ, ಕಂಪಲಾಪುರ, ಪಿರಿಯಾಪಟ್ಟಣ, ಹುಣಸೂರು ಪಟ್ಟಣಗಳಲ್ಲಿ ಬೈಪಾಸ್ ಮಾರ್ಗ ಉz್ದÉÃಶಿತ ಯೋಜನೆಯಲ್ಲಿದೆ. ಗುಡ್ಡೆಹೊಸೂರಿನ ತೆಪ್ಪದಕಂಡಿ ತೂಗು ಸೇತುವೆ ಬಳಿ ಕಾವೇರಿ ನದಿಗೆ ಅಡ್ಡವಾಗಿ ಹೊಸ ಸೇತುವೆಯೂ ನಿರ್ಮಾಣವಾಗಲಿದೆ.
ಮೈಸೂರು - ಕುಶಾಲನಗರ ಹೆದ್ದಾರಿಯ ಭಾಗವಾಗಿರುವ ಪ್ಯಾಕೇಜ್ 3ಗೆ ಅಂತಿಮ ಅನುಮೋದನೆ ಸಿಕ್ಕಿದೆ. ಹಾಗಾಗಿ ಇನ್ನು 2 ವಾರಗಳಲ್ಲಿ ಕೆಲಸ ಶುರುವಾಗಲಿದೆ. ಅನುಮೋದನೆ ಸಿಗದ ಕಾರಣ ಈ ಯೋಜನೆ ಬಹಳ ಸಮಯದಿಂದ ಸ್ಥಗಿತಗೊಂಡಿತ್ತು. ಇದೀಗ ಯೋಜನೆಗೆ ಅಂತಿಮ ಅನುಮೋದನೆ ಸಿಕ್ಕಿರುವುದರಿಂದ ಎಲ್ಲಾ ಅಡೆತಡೆಗಳು ನಿವಾರಣೆ ಆದಂತಾಗಿದೆ. ಈ ಯೋಜನೆ ಪ್ರಾರಂಭಿಸಲು ಸಹಾಯ ಮತ್ತು ಬೆಂಬಲ ನೀಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರಿಗೆ ವಿಶೇಷ ಧನ್ಯವಾದಗಳು ಹೇಳಲೇಬೇಕಾಗಿದೆ.
ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್, ಮೈಸೂರು-ಕೊಡಗು ಸಂಸದ