ಯಲ್ಲಾಪುರ-ಮುಂಡಗೋಡ ಕ್ಷೇತ್ರದಿಂದ ಅತ್ಯಧಿಕ ಮತ

BJP
Published on

ಯಲ್ಲಾಪುರ: ಪಟ್ಟಣದ ವಿವಿಧೆಡೆ ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಅವರು ಮಂಡಲ ಪ್ರಮುಖರ ನೇತೃತ್ವದಲ್ಲಿ ಮಹಾಸಂಪರ್ಕ ಅಭಿಯಾನದ ಭಾಗವಾಗಿ ಅಭ್ಯರ್ಥಿ ಕಾಗೇರಿ ಪರ ಮನೆ ಮನೆ ಪ್ರಚಾರ ನಡೆಸಿದರು.

ಪಟ್ಟಣದಲ್ಲಿ ಎಲ್ಲ ಅಂಗಡಿಗಳು, ಸಂತೆ ಮಾರುಕಟ್ಟೆ, ರಿಕ್ಷಾ ನಿಲ್ದಾಣ ಹಾಗೂ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದರು.
ಈ ವೇಳೆ ಮಾತನಾಡಿದ ಕೋಣೆಮನೆ, ಎಲ್ಲರ ಬಾಯಲ್ಲಿ ‘ಮೋದಿ ಮತ್ತೊಮ್ಮೆ’ ಘೋಷಣೆ ಮೊಳಗುತ್ತಿದೆ. ಎಲ್ಲೆಡೆ ಜನರಿಂದ ಉತ್ತಮ ಸ್ಪಂದನೆ ದೊರಕುತ್ತಿದ್ದು, ಬಿಜೆಪಿ ಈ ಹಿಂದಿನ ಚುನಾವಣೆಗಳಿಗಿಂತ ಹೆಚ್ಚು ಬಹುಮತ ಪಡೆದು ನಮ್ಮ ಅಭ್ಯರ್ಥಿ ಗೆಲ್ಲುವುದು ನಿಶ್ಚಿತ, ಅದರಲ್ಲಿಯೂ ಯಲ್ಲಾಪುರ-ಮುಂಡಗೋಡ ಕ್ಷೇತ್ರದಿಂದ ಅತ್ಯಧಿಕ ಬಹುಮತ ದೊರೆಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಂಡಲಾಧ್ಯಕ್ಷ ಪ್ರಸಾದ ಹೆಗಡೆ, ಪ್ರಮುಖರಾದ ಉಮೇಶ ಭಾಗ್ವತ್, ಜಿ.ಎನ್. ಗಾಂವ್ಕರ, ಗಣಪತಿ ಮಾನಿಗದ್ದೆ, ರಾಘವೇಂದ್ರ ಭಟ್ಟ ಹಾಸಣಗಿ, ರಾಮು ನಾಯ್ಕ, ಸೋಮು ನಾಯ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net