ಉಡುಪಿಯಲ್ಲಿ ಕರೊನಾ ಉಗ್ರ ತಾಂಡವ, 73 ಮಂದಿಗೆ ಪಾಸಿಟಿವ್ !

carona logo
Published on

ಉಡುಪಿ: ಹೊರ ರಾಜ್ಯ, ವಿದೇಶದಿಂದ ಆಗಮಿಸಿದ ಮಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕರೊನಾ ಸೋಂಕು ಕಂಡು ಬರುತ್ತಿದ್ದು, ಉಡುಪಿ ಜಿಲ್ಲೆಯಲ್ಲಿ ಕರೊನಾ ಉಗ್ರ ತಾಂಡವವಾಡುತ್ತಿದೆ. ಸೋಮವಾರ ಒಂದೇ ದಿನ 73 ಮಂದಿಗೆ ಸೋಂಕು ದೃಢಪಟ್ಟಿದೆ. 73 ಮಂದಿಯೂ ಮಹಾರಾಷ್ಟ್ರ, ದುಬೈನಿಂದ ಬಂದವರಾಗಿದ್ದಾರೆ. ಇದರಲ್ಲಿ ಮೂವರು ಮಕ್ಕಳಿದ್ದಾರೆ.

ಮುಂಬೈ, ವಿದೇಶದಿಂದ ಬರುತ್ತಿರುವ ಕರಾವಳಿಗರಲ್ಲಿ ಸೋಂಕು ಹೆಚ್ಚುತ್ತಿರುವುದು ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಳವಾಗುವಂತೆ ಮಾಡಿದೆ. ಜಿಲ್ಲೆಯಲ್ಲಿ ಮಾ.29ರವರೆಗೆ ಕಾಣಿಸಿಕೊಂಡಿದ್ದು ಮೂರು ಪ್ರಕರಣಗಳು ಮಾತ್ರ. ಅನಂತರ ಮೇ 15ರವರೆಗೆ ಯಾವುದೇ ಪಾಸಿಟಿವ್ ಪತ್ತೆಯಾಗಿರಲಿಲ್ಲ. ಇದೀಗ ಒಟ್ಟು ಸೋಂಕಿತರ ಸಂಖ್ಯೆ 260ಕ್ಕೆ ಏರಿಕೆಯಾಗಿದೆ. ಕೆಲವರ ಸಂಪರ್ಕ ಪತ್ತೆಹಚ್ಚಲಾಗುತ್ತಿದೆ. ಈಗಾಗಲೇ ಮನೆಗೆ ತೆರಳಿ ಪಾಸಿಟಿವ್ ಬಂದವರು ಇರುವ ಪ್ರದೇಶವನ್ನು ಕಂಟೇನ್ಮೆಂಟ್ ಜೋನ್ ಮಾಡಿ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ಇಲ್ಲಿವರೆಗೆ 27 ಕಂಟೇನ್ಮೆಂಟ್ ಜೋನ್ ಮಾಡಲಾಗಿದ್ದು, ಕುಂದಾಪುರ ಭಾಗದಲ್ಲಿ ಅತಿ ಹೆಚ್ಚು ಇವೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net