

ಯಲ್ಲಾಪುರ: ಪಟ್ಟಣದ ವಿಶ್ವದರ್ಶನ ಕೇಂದ್ರೀಯ ಶಾಲೆಯ ವಿದ್ಯಾರ್ಥಿಗಳ 2024-25ನೇ ಸಾಲಿನ 10ನೇ ತರಗತಿಯ ವಾರ್ಷಿಕ ಪರೀಕ್ಷೆ ಫಲಿತಾಂಶ ಶೇ. 100ರಷ್ಟು ಆಗಿದೆ. ಕದಂಬ ಸಹೋದಯ ಸ್ಕೂಲ್ ಕಾಂಪ್ಲೆಕ್ಸ್ ಅಡಿಯ 11 ಶಾಲೆಗಳ ವಿದ್ಯಾರ್ಥಿಗಳು ಗರಿಷ್ಠ ಅಂಕ ಗಳಿಸಿ ಸಾಧನೆ ಮಾಡಿದ್ದಾರೆ.
ಶ್ರೀನಿಧಿ ಭಟ್ಟ ಶೇ. 99 ಅಂಕ ಗಳಿಸುವ ಮೂಲಕ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ಸೃಷ್ಟಿ ಸತೀಶ ಹೆಬ್ಬಾರ ಶೇ. 98 ದ್ವಿತೀಯ ಸ್ಥಾನ ಹಾಗೂ ಶ್ರಾವ್ಯ ನರಸಿಂಹ ಹೆಗಡೆ ಶೇ. 97 ಪಡೆದು ಶಾಲೆಗೆ ತೃತೀಯ ಸ್ಥಾನ ಪಡೆದಿರುತ್ತಾಳೆ.
ಗರಿಷ್ಠ 10 ಶ್ರೇಣಿಯಲ್ಲಿ ಚಿನ್ಮಯಿ ಶ್ರೀಪತಿ ಭಟ್ಟ ಶೇ. 97, ಸೌಂದರ್ಯ ಭಟ್ಟ ಶೇ. 95.2, ನಿಶಾಂತ ಗಣಪತಿ ಭಟ್ಟ ಶೇ. 95, ಧನ್ವಿ ಅಜಯ ನಾಯಕ ಶೇ. 94, ಶ್ರೇಯಾ ಕವಾಲಿ ಶೇ. 93, ಪೂರ್ವಿ ಮಹೇಶ ಭಟ್ಟ ಶೇ. 93, ವರ್ಷಿಣಿ ನರಸಿಂಹ ಹೆಬ್ಬಾರ ಶೇ. 93 ಅಂಕ ಗಳಿಸುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ. ಪರೀಕ್ಷೆಗೆ ಹಾಜರಾದ ಒಟ್ಟು 62 ವಿದ್ಯಾರ್ಥಿಗಳಲ್ಲಿ 60 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಹಾಗೂ ಇಬ್ಬರು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಸಿ.ಬಿ.ಎಸ್.ಇ ವಿಭಾಗದ 10ನೇ ತರಗತಿಯ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಸಾಧನೆಗೆ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ, ವಿಭಾಗ ಮುಖ್ಯಸ್ಥರು ಹಾಗೂ ಶಿಕ್ಷಕ ವೃಂದದವರು ಸಂತಸ ವ್ಯಕ್ತಪಡಿಸಿದ್ದಾರೆ.