ಕಡೂರಿನ ಪದವಿ ಪೂರ್ವ ಕಾಲೇಜಿನಲ್ಲಿ 1.25 ಕೋಟಿ ರೂ. ವೆಚ್ಚದಲ್ಲಿ ಹೆಚ್ಚುವರಿ ಕೊಠಡಿಗಳ
ನಿರ್ಮಾಣಕ್ಕೆ ಶಾಸಕ ಕೆ.ಎಸ್.ಆನಂದ್ ಭೂಮಿಪೂಜೆ ನೆರವೇರಿಸಿದರು. ಭಂಡಾರಿ
ಶ್ರೀನಿವಾಸ್, ತೋಟದಮನೆ ಮೋಹನ್ ಕುಮಾರ್, ಎಇಇ ಬಸವರಾಜ್ ಮತ್ತಿತರಿದ್ದರು.
Published on:
16 Mar 2024, 2:29 pm
ಕಡೂರು: ಪಟ್ಟಣದ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ 1.25 ಕೋಟಿ ರೂ. ವೆಚ್ಚದಲ್ಲಿ
ಹೆಚ್ಚುವರಿ ಕೊಠಡಿಗಳ ನಿರ್ಮಾಣದ ಕಾಮಗಾರಿಗೆ ಶಾಸಕ ಕೆ.ಎಸ್.ಆನಂದ್ ಭೂಮಿ ಪೂಜೆ
ನೆರವೇರಿಸಿದರು. ನಂತರ ಮಾತನಾಡಿದ ಅವರು, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ
ಕಾಲೇಜಿನ ವಿದ್ಯಾರ್ಥಿಗಳ ಸಹಕಾರಿಯಾಗಲೆಂದು ಕೊಠಡಿಗಳ ನಿರ್ಮಾಣ ಕಾರ್ಯವನ್ನು
ಕೈಗೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಹೈಟೆಕ್ ಶೌಚಗೃಹ ನಿರ್ಮಾಣ ಕಾರ್ಯ
ನೆರವೇರಿಸಲಾಗುತ್ತದೆ ಎಂದರು. ಜಿಪಂ ಕಚೇರಿ ಸಮೀಪ ಇರುವ ಪಶುಆಸ್ಪತ್ರೆ ವಿಸ್ತರಣಾ ಘಟಕದ ಕೇಂದ್ರ ಪ್ರಾರಂಭಕ್ಕೆ
ಶಾಸಕ ಕೆ.ಎಸ್.ಆನಂದ್ ಚಾಲನೆ ನೀಡಿದರು. ಪುರಸಭೆ ಸದಸ್ಯರಾದ ಭಂಡಾರಿ
ಶ್ರೀನಿವಾಸ್, ತೋಟದಮನೆ ಮೋಹನ್‌ಕುಮಾರ್, ಕಾಲೇಜು ಪ್ರಾಚಾರ್ಯ ಡಾ. ತವರಾಜ್,
ಎಇಇ ಬಸವರಾಜ್, ಜೆಇ ಗಿರೀಶ್, ಕಂಸಾಗರ ಶೇಖರ್, ಪಶು ಸಹಾಯಕ ನಿರ್ದೇಶಕ
ಡಾ.ಉಮೇಶ್, ಮುಖಂಡರಾದ ಕಾಂತರಾಜ್, ಅಶೋಕ್, ಚೌಳಹಿರಿಯೂರು ಪ್ರಕಾಶ್,
ರಂಗನಾಥ್ ಮತ್ತಿತರಿದ್ದರು.