

ಹನುಮಸಾಗರ: ವಿದ್ಯಾರ್ಥಿಗಳು ಸಾಧಕರು ಹಾಗೂ ಮಹಾತ್ಮರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಇತರರಿಗೆ ಮಾದರಿಯಾಗಬೇಕು ಎಂದು ನಿವೃತ್ತ ಶಿಕ್ಷಕ ಬಸಯ್ಯ ಎಂ. ಗೋನಾಳಮಠ ಹೇಳಿದರು.
ಸಮೀಪದ ಕ್ಯಾದಿಗುಪ್ಪ ಸರ್ಕಾರಿ ಪ್ರೌಢಶಾಲೆಗೆ ಶನಿವಾರ ಮಹಾತ್ಮರ 26 ಭಾವಚಿತ್ರ ದೇಣಿಗೆ ನೀಡಿ ಮಾತನಾಡಿದರು.
ದುಶ್ಚಟಗಳಿಗೆ ಬಲಿಯಾಗಿ ಅಮೂಲ್ಯವಾದ ವಿದ್ಯಾರ್ಥಿ ಜೀವನ ಹಾಳು ಮಾಡಿಕೊಳ್ಳಬೇಡಿ. ಪ್ರತಿಯೊಬ್ಬರು ಉತ್ತಮ ಬದುಕು ಕಟ್ಟಿಕೊಳ್ಳಲು ಮುಂದಾಗಬೇಕು. ಬೀದಿ ದೀಪದ ಕೆಳಗೆ ಓದಿದ ಡಾ.ಬಿ.ಆರ್. ಅಂಬೇಡ್ಕರ್ ಇಂದು ದೇಶದ ಜನರ ಮನೆ ಮಾತಾಗಿದ್ದಾರೆ. ಕಲಿಯುವ ಸಮಯದಲ್ಲಿ ಉತ್ತಮ ಗುರಿ ಇಟ್ಟುಕೊಂಡು ನಿರಂತರ ಅಭ್ಯಾಸ ಮಾಡಿದರೆ ಯಶಸ್ಸು ನಿಮ್ಮದಾಗುತ್ತದೆ ಎಂದರು.
ಮುಖ್ಯಶಿಕ್ಷಕ ರಾಜೇಂದ್ರ ಸಿನ್ನೂರ, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಬಸಪ್ಪ ವಾಲಿಕಾರ, ಶಿಕ್ಷಕರಾದ ಚಂದ್ರಶೇಖರ ಕಿರಗಿ, ಮಹಾಂತೇಶ ಹೊಸಮನಿ, ಎಸ್.ಎಸ್.ಅಂಗಡಿ, ಹನುಮಂತ ರಾಯಬಾಗಿ, ಗೀತಾ ದೇವಾಂಗಮಠ ಇದ್ದರು.