ಉನ್ನತ ಜೀವನಕ್ಕೆ ಶಿಕ್ಷಣ ಅಗತ್ಯ

22A LD02
ಕವಲೂರಿನಲ್ಲಿ ಗಿರಿಯಮ್ಮ ಪರಪ್ಪ ಹೆಬ್ಬಾಳ ಸರ್ಕಾರಿ ಪ್ರೌಢಶಾಲೆಯಲ್ಲಿ ಸತತ ಗೈರು ಹಾಜರಾಗಿರುವ ಎಸ್ಸೆಸ್ಸೆಲ್ಸಿ ವಿಧ್ಯಾರ್ಥಿಗಳ ಮನೆ ಭೇಟಿ ನೀಡಿ ಮರಳಿ ಶಾಲೆಗೆ ಕರೆ ತರುವ ಕಾರ್ಯಕ್ರಮ ನಡೆಯಿತು. ಮುಖ್ಯ ಶಿಕ್ಷಕ ಜಿ.ಎಸ್.ಗೌಡರ, ಶಿಕ್ಷಕರಾದ ತೋಟಪ್ಪ ಮಟ್ಟಿ, ಮಲ್ಲಪ್ಪ ದಳವಾಯಿ, ನಾಗರಾಜ ಶೆಟ್ಟರ, ರಾಜಪ್ಪ, ಪ್ರಭು ಸಂಕಣ್ಣವರ, ದೇವಪ್ಪ ಮುಕ್ಕಣ್ಣವರ ಇದ್ದರು.
Published on

ಅಳವಂಡಿ: ಮಕ್ಕಳಿಗೆ ಶಿಕ್ಷಣವೇ ದೊಡ್ಡ ಆಸ್ತಿ, ಬದುಕಿನಲ್ಲಿ ಉನ್ನತ ಮಟ್ಟದಲ್ಲಿ ಸಾಧಿಸಬೇಕಾದರೆ ಶಿಕ್ಷಣ ಅಗತ್ಯ. ಅದ್ದರಿಂದ ಮಕ್ಕಳನ್ನು ಶಾಲೆಯಿಂದ ಹೊರಗುಳಿಯದಂತೆ ಪಾಲಕರು ನೋಡಿಕೊಳ್ಳಿ ಎಂದು ಮುಖ್ಯ ಶಿಕ್ಷಕ ಜಿ.ಎಸ್.ಗೌಡರ ತಿಳಿಸಿದರು.

ಸಮೀಪದ ಕವಲೂರು ಗ್ರಾಮದ ಗಿರಿಯಮ್ಮ ಪರಪ್ಪ ಹೆಬ್ಬಾಳ ಸರ್ಕಾರಿ ಪ್ರೌಢಶಾಲೆಯಲ್ಲಿ ಸತತ ಗೈರು ಹಾಜರಾಗಿರುವ ಎಸ್ಸೆಸ್ಸೆಲ್ಸಿ ವಿಧ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಮರಳಿ ಶಾಲೆಗೆ ಕರೆ ತರುವ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು.

ಶಿಕ್ಷಕರ ತಂಡ ಗೈರು ಹಾಜರಾದ ಮಕ್ಕಳ ಮನೆಗೆ ತೆರಳಿ ಮಕ್ಕಳ ಹಾಗೂ ಪಾಲಕ ಮನವೊಲಿಸಿ ಶಾಲೆಗೆ ಬರುವಂತೆ ಆಗ್ರಹಿಸಿದರು.
ಶಿಕ್ಷಕರಾದ ತೋಟಪ್ಪ ಮಟ್ಟಿ, ಮಲ್ಲಪ್ಪ ದಳವಾಯಿ, ನಾಗರಾಜ ಶೆಟ್ಟರ, ರಾಜಪ್ಪ, ಪ್ರಭು ಸಂಕಣ್ಣವರ, ದೇವಪ್ಪ ಮುಕ್ಕಣ್ಣವರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net