ಹೆಚ್ಚಿನ ಇಳುವರಿಗಾಗಿ ಪೂಜೆ

08 YLB 01
ಯಲಬುರ್ಗಾ ತಾಲೂಕಿನ ಬಂಡಿಹಾಳ ಗ್ರಾಮದಲ್ಲಿ ಮಳೆಗಾಗಿ ಗ್ರಾಮಸ್ಥರು ವಿಶೇಷ ಗುರ್ಜಿಪೂಜೆ ನೇರವೇರಿಸಿದರು.
Published on

ಯಲಬುರ್ಗಾ: ತಾಲೂಕಿನ ಬಂಡಿಹಾಳ ಗ್ರಾಮದಲ್ಲಿ ಮಳೆಗಾಗಿ ವಿಶೇಷ ಗುರ್ಜಿಪೂಜೆ ಭಾನುವಾರ ಮಾಡಲಾಯಿತು.

ಗ್ರಾಮದ ಮುಖಂಡ ಕೆರಿಬಸಪ್ಪ ಪಟ್ಟೇದ ಮಾತನಾಡಿ, ಪ್ರತಿವರ್ಷಕ್ಕಿಂತ ಈ ಭಾರಿ ಹೆಚ್ಚಿನ ಮಳೆಯಾಗಿ ಉತ್ತಮ ಫಸಲು ಬರಲಿ ಎಂದು ಗ್ರಾಮೀಣ ಪ್ರದೇಶದಲ್ಲಿ ಇಂತಹ ಆಚರಣೆಗಳು ಪೂರ್ವಜರಿಂದ ನಡೆದು ಬಂದಿದ್ದು, ನಾವು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ.

ಪ್ರತಿವರ್ಷ ನಾವು ಅಂದುಕೊಂಡಷ್ಟು ಮಳೆ ಆಗಲ್ಲಾ. ಆದರೆ, ಈ ಭಾರಿ ಮುಂಗಾರು ಮಳೆ ಚನ್ನಾಗಿ ಆಗುತ್ತಿದ್ದು, ಉತ್ತಮ ಮಳೆಯಾಗಿ ಹೆಚ್ಚಿನ ಇಳುವರಿ ನಿರೀಕ್ಷಿಸಲಾಗುತ್ತಿದೆ ಎಂದರು.

ಗ್ರಾಮಸ್ಥರಾದ ಮಲ್ಲೇಶಪ್ಪ ಬಂಡ್ರಿ, ಹನುಮಪ್ಪ ಗುರಿಕಾರ, ಶೇಖಮ್ಮ, ಭಾರತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net