ಹೈ ಟೆನ್ಷನ್‌ವಯರ್ ಸ್ಪರ್ಶದಿಂದ ಕಾರ್ಮಿಕ ಮೃತ್ಯು

current shock
Published on

ಹಿರಿಯಡ್ಕ: ಬೊಮ್ಮಾರಬೆಟ್ಟು ಗ್ರಾಮದ ಗುಡ್ಡೆಯಂಗಡಿ ಪೆಲತ್ತೂರು ಎಂಬಳ್ಳಿ ಮನೆಯ ಪಂಪಿಗೆ ತ್ರಿಪೇಸ್ ಕರೆಂಟ್ ಲೈನ್ ಅಳವಡಿಸುವ ಸಂದರ್ಭ ಸಮೀಪದಲ್ಲಿದ್ದ ಹೈ ಟೆನ್ಷನ್‌ವಯರ್ ಸ್ಪರ್ಶಿಸಿ ಕಾರ್ಮಿಕರೊಬ್ಬರು ಮಂಗಳವಾರ ಮೃತಪಟ್ಟಿದ್ದಾರೆ.

ಅಜೆಕಾರಿನ ಸತೀಶ ಶೆಟ್ಟಿ(43) ಮೃತರು. ಇವರು ಇತರ ಕೆಲಸಗಾರರೊಂದಿಗೆ 10 ಕಂಬಗಳ ಎಲ್,ಟಿ ಲೈನ್‌ನ 2-ಪೇಸ್ ಇದ್ದುದ್ದನ್ನು 3-ಪೇಸ್ ಮಾಡುವ ಬಗ್ಗೆ ಹೆಚ್ಚುವರಿಯಾಗಿ ಎರಡು ಲೈನ್ ವಯರ್ ಎಳೆದಿದ್ದು, ನಂತರ ಮದ್ಯಾಹ್ನ 2:30ಕ್ಕೆ ಒಂದು ಕಂಬದಲ್ಲಿ ಬಾಕಿ ಇದ್ದ ಪಿನ್ ಇನ್‌ಸ್ಲೇಟ್‌ಗೆ ಸರಿಗೆ ಸುತ್ತಲು ವಿದ್ಯುತ್ ಕಂಬ ಹತ್ತಿ ಕಂಬದ ಲೈನ್‌ನ ಪಿನ್ ಇನ್‌ಸ್ಲೇಟ್‌ಗೆ ಸರಿಗೆ ಸುತ್ತುತ್ತಿರುವಾಗ ಅವರ ತಲೆ ಎಲ್ ಟಿ ಲೈನ್‌ನ ಮೇಲೆ ಇರುವ ಹೈ ಟೆನ್ಷನ್‌ವಯರ್‌ಗೆ ತಾಗಿ ಕರೆಂಟ್ ಹರಿದು ಅಲ್ಲಿಂದಲೇ ಕೆಳಗೆ ಬಿದ್ದು, ಮಾತನಾಡುತ್ತಿರಲಿಲ್ಲ. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಮಣಿಪಾಲ ಕೆ,ಎಂ,ಸಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಪರೀಕ್ಷಿಸಿದ ವೈದ್ಯರು ದಾರಿ ಮದ್ಯೆ ಮೃತ ಪಟ್ಟಿರುವುದಾಗಿ ತಿಳಿಸಿದ್ದಾರೆ.

ಈ ಅವಘಡಕ್ಕೆ ಗುತ್ತಿಗೆದಾರಾದ ಶಂಕರ್ ನಾಯ್ಕ ಮತ್ತು ಮುಖ್ಯ ಗುತ್ತಿಗೆದಾರ ಸದಾಶಿವ ಅವರು ಕೆಲಸಗಾರಿಗೆ ಅಗತ್ಯ ಸುರಕ್ಷಾ ಸಾಧನಗಳನ್ನು ನೀಡದೆ ನಿರ್ಲಕ್ಷ್ಯ ವಹಿಸಿರುವುದೆ ಕಾರಣವಾಗಿದೆ ಕರೆಂಟ್ ಲೈನ್ ಗ್ಯಾಂಗ್ ಮೆನ್ ದಿನೇಶ್ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net