ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಆಡಳಿತ ಮಂಡಳಿಗೆ ಚುನಾವಣೆ: ಅಧ್ಯಕ್ಷರಾಗಿ ಎಚ್.ಡಿ.ರಮೇಶ್, ಕಾರ್ಯದರ್ಶಿಯಾಗಿ ಬಿ.ಡಿ.ಶಂಕರೇಗೌಡ ಅವಿರೋಧ ಆಯ್ಕೆ

High School Co Teachers Association Election Mandya
Published on

ಮಂಡ್ಯ: ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಎಚ್.ಡಿ.ರಮೇಶ್ ಚುನಾಯಿತರಾಗಿ ಹಾಗೂ ನೂತನ ಕಾರ್ಯದರ್ಶಿಯಾಗಿ ಬಿ.ಡಿ.ಶಂಕರೇಗೌಡ ಅವಿರೋಧ ಆಯ್ಕೆಯಾದರು.

ನಗರದ ವಿ.ವಿ ರಸ್ತೆಯಲ್ಲಿರುವ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಎಚ್.ಡಿ.ರಮೇಶ್ ಆಯ್ಕೆಯಾದರು. ಅಂತೆಯೇ ಬಿ.ಡಿ.ಶಂಕರೇಗೌಡ ಅವಿರೋಧವಾಗಿ ಚುನಾಯಿತರಾದರು.

ಬಳಿಕ ಮಾತನಾಡಿದ ಎಚ್.ಡಿ.ರಮೇಶ್, ಎಲ್ಲರೂ ಒಗ್ಗೂಡಿ ಸಂಘದ ಅಭಿವೃದ್ದಿಗೆ ಮತ್ತು ಶಿಕ್ಷಕರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಸಂಕಲ್ಪ ಮಾಡೋಣ. ತಾಲೂಕಿನ ಎಲ್ಲ ಪದಾಧಿಕಾರಿ ಮತ್ತು ನಿರ್ದೇಶಕರ ಸಹಕಾರದಿಂದ ಸಹ ಶಿಕ್ಷಕರ ಬೇಡಿಕೆಗಳನ್ನು ಸಂಬಂಧಪಟ್ಟರಿಗೆ ತಿಳಿಸಿ, ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯಗತಗೊಳಿಸೋಣ ಎಂದರು.

ಸಂಘದ ಪದಾಧಿಕಾರಿ ಕೆ.ಆರ್.ಶಶಿಧರ ಈಚಗೆರೆ ಮಾತನಾಡಿ, ಸಹ ಶಿಕ್ಷಕರ ಸಮಸ್ಯೆಗಳಿಗೆ ಸೂಕ್ತ ಪರಿಹಾರ, ಜ್ವಲಂತ ಸಮಸ್ಯೆಗಳಿಗೆ ಸೂಕ್ತ ರೀತಿಯ ಪರಿಹಾರ ಹುಡುಕುವ ನಿಟ್ಟಿನಲ್ಲಿ ಆಡಳಿತ ಮಂಡಳಿ ಪದಾಧಿಕಾರಿಗಳು ಪರಿಹಾರಕ್ಕೆ ಒತ್ತಾಯಿಸಲಿ ಎಂದು ತಿಳಿಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಟಿ.ರವಿಶಂಕರ್, ಶಿಕ್ಷಕರ ಸಂಘದ ಪ್ರಭಾರಿ ಅಧ್ಯಕ್ಷ ಆರ್.ಸಿ.ನಾಗೇಗೌಡ, ಖಜಾಂಚಿ ಬಿ.ಆರ್.ಪ್ರಸನ್ನ, ಸಹ ಕಾರ್ಯದರ್ಶಿ ವಿಶ್ವ ಮಂಜು ಸ್ವಾಮಿ, ತಾಲೂಕು ಘಟಕದ ಪದಾಧಿಕಾರಿಗಳಾದ ಶಿವಕುಮಾರ, ಪ್ರಸಾದ್, ರಮೇಶ್, ರಾಘವೇಂದ್ರ, ಮಲ್ಲೇಶ್, ಮಂಚೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net