ಪಕ್ಷದಿಂದ ಕಾರ್ಯಕರ್ತರಿಗೆ ಹೆಚ್ಚಿನ ಗೌರವ: ಅಶೋಕ್ ರೈ ಹೇಳಿಕೆ

Ism_party workers
Published on

ಪುತ್ತೂರು ಗ್ರಾಮಾಂತರ: ಸರ್ಕಾರದಿಂದ ಬರುವ ಅನುದಾನ ಎಲ್ಲ ವಲಯಗಳಿಗೂ ಸಮಾನವಾಗಿ ಹಂಚಲಾಗುತ್ತಿದ್ದು, ನರಿಮೊಗರು ಗ್ರಾಮದಲ್ಲಿ ಹೆಚ್ಚು ಮತ ಲಭ್ಯವಾಗಿರುವ ಕಾರಣ ಮುಂಂದಿನ ದಿನಗಳಲ್ಲೂ ಹೆಚ್ಚಿನ ಅನುದಾನ ಒದಗಿಸುವ ಮೂಲಕ ಜನತೆ ಋಣ ತೀರಿಸುವ ಕೆಲಸ ಮಾಡುವೆ. ಪಕ್ಷದ ವಲಯ ಮತ್ತು ಬೂತ್ ಅಧ್ಯಕ್ಷರ ಗಮನಕ್ಕೆ ತಂದೇ ಅನುದಾನ ಹಂಚಿಕೆ ಮತ್ತು ಅಕ್ರಮ ಸಕ್ರಮ ಕಡತಗಳ ವಿಲೇವಾರಿ ಮಾಡಲಾಗುತ್ತಿದ್ದು, ಪಕ್ಷದ ಜೀವಾಳ ಆಗಿರುವ ಕಾರ್ಯಕರ್ತರಿಗೆ ಹೆಚ್ಚಿನ ಗೌರವ ನೀಡುವ ಕೆಲಸ ಕಾಂಗ್ರೆಸ್ ಪಕ್ಷದ ವತಿಯಿಂದ ನಡೆಯುತ್ತಿದೆ ಎಂದು ಶಾಸಕ ಅಶೋಕ್‌ಕುಮಾರ್ ರೈ ತಿಳಿಸಿದರು.

ನರಿಮೊಗರಿನಲ್ಲಿ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆ ಹಾಗೂ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾಂಗ್ರೆಸ್ ಮುಖಂಡ ಬಾಬು ಶೆಟ್ಟಿ ನರಿಮೊಗರು ಮಾತನಾಡಿ, ನರಿಮೊಗರು ಗ್ರಾಮಕ್ಕೆ ಇನ್ನೂ ಹೆಚ್ಚಿನ ಅನುದಾನ ನೀಡಬೇಕು. ಜನರಿಗೆ ಅಗತ್ಯ ಇರುವ ಕಡೆಗಳಲ್ಲಿನ ರಸ್ತೆಗಳ ಅಭಿವೃದ್ಧಿ ಕಾರ್ಯ ಆಗಬೇಕಿದೆ ಎಂದು ಮನವಿ ಮಾಡಿದರು.

ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಪಕ್ಷದ ಮುಖಂಡರಾದ ವಿಶಾಲಾಕ್ಷಿ ಬನ್ನೂರು, ಇಲ್ಯಾಸ್ ಉಪಸ್ಥಿತರಿದ್ದರು. ಹೊನ್ನಪ್ಪ ಪೂಜಾರಿ ಕೈಂದಾಡಿ ಸ್ವಾಗತಿಸಿದರು. ರವೀಂದ್ರ ನೆಕ್ಕಿಲು ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net