ಶೇ. 16ರಷ್ಟು ಲಾಭಾಂಶ ಕೊಡುವುದಾಗಿ ನಂಬಿಸಿ 71 ಲಕ್ಷ ರೂ. ವಂಚನೆ

Cibra
Published on
ಹಾವೇರಿ: ಎಕ್ಸಿಸ್​ಕೆಎಸ್​ಪ್ರೋ ಡಾಟ್​ಕಾಮ್​ನಲ್ಲಿ ಹೂಡಿಕೆ ಮಾಡಿದರೆ ಶೇ. 8ರಿಂದ ಶೇ. 16ರಷ್ಟು ಲಾಭಾಂಶ ಕೊಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ ಬರೋಬ್ಬರಿಗೆ 71 ಲಕ್ಷ ರೂ. ವಂಚಿಸಿರುವ ಕುರಿತು ಇಲ್ಲಿಯ ಸೈಬರ್​ ಕ್ರೆೈಂ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳಿಯ ವ್ಯಕ್ತಿಯೊಬ್ಬರಿಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ನಮ್ಮಲ್ಲಿ ಹೂಡಿಕೆ ಮಾಡಿದರೆ ಶೇ. 8ರಿಂದ ಶೇ. 16ರಷ್ಟು ಲಾಭಾಂಶ ಕೊಡುವುದಾಗಿ ನಂಬಿಸಿದ್ದಾನೆ. ಇದನ್ನು ಕೇಳಿದ ವ್ಯಕ್ತಿ ವಿವಿಧ ಬ್ಯಾಂಕ್​ ಖಾತೆ ಮೂಲಕ 71 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ. ಆದರೆ, ಹಣ ಹಾಕಿಸಿಕೊಮಡ ಅಪರಿಚಿತ ವಾಪಸ್​ ಲಾಭಾಂಶ ಕೊಡದೆ ಮತ್ತು ಕೊಟ್ಟ ಹಣ ಕೂಡ ನೀಡದೆ ಮೋಸ ಮಾಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net