

ವಿಜಯಪುರ: ಬಬಲೇಶ್ವರ ಮತ ಕ್ಷೇತ್ರದಲ್ಲಿ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಇದರ ಜೊತೆಗೆ ಅಭಿವೃದ್ಧಿ ಕಾಮಗಾರಿಗಳಿಗೂ ಆದ್ಯತೆ ನೀಡಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ತಿಳಿಸಿದರು.
ಬುಧವಾರ ಬರಟಗಿ ಎಲ್ಟಿ- 1 ಮತ್ತು 3 ರಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ತಲಾ ರೂ. 100 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸಿಸಿ ರಸ್ತೆ ಕಾಮಗಾರಿಗಳಿಗೆ ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕೈಗಾರಿಕೆ, ಮೂಲ ಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರು, ಸಿಎಸ್‌ಆರ್ ಅನುದಾನವನ್ನು ಹೆಚ್ಚಿನ ಪ್ರಮಾಣದಲ್ಲಿ ಶಾಲೆಗಳ ಅಭಿವೃದ್ಧಿಗೆ ಬಳಸಲು ಕ್ರಮ ಕೈಗೊಂಡಿದ್ದಾರೆ. ಇದರಿಂದ ಗ್ರಾಮೀಣ ಭಾಗದ ಬಡಜನರ ಮಕ್ಕಳಿಗೆ ಸ್ಮಾರ್ಟ್ ಕ್ಲಾಸ್ ಸೇರಿದಂತೆ ಕಾನ್ವೆಂಟ್ ಶಾಲೆಗಳ ಮಾದರಿಯಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಆಗತ್ಯವಾಗಿರುವ ಪರಿಕರಗಳನ್ನು ಒದಗಿಸಲಾಗುತ್ತಿದೆ. ಅಲ್ಲದೇ, ಮತಕ್ಷೇತ್ರದಲ್ಲಿ ರಸ್ತೆಗಳ ನಿರ್ಮಾಣ, ದುರಸ್ಥಿ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಇನ್ನುಳಿದಿರುವ ಬಾಕಿ ಕಾಮಗಾರಿಗಳಿಗೂ ಅತೀ ಶೀಘ್ರದಲ್ಲಿ ಚಾಲನೆ ಸಿಗಲಿದೆ. ಅಭಿವೃದ್ಧಿ ಕೆಲಸಗಳಿಗೆ ಗ್ರಾಮಸ್ಥರೂ ಕೂಡ ಸಂಪೂರ್ಣ ಸಹಕಾರ ನೀಡುವ ಮೂಲಕ ಸಹಕರಿಸಬೇಕು ಎಂದು ಅವರು ಹೇಳಿದರು.
ಜಲಸಂಪನ್ಮೂಲ ಸಚಿವರಾಗಿದ್ದಾಗ ಎಂ.ಬಿ. ಪಾಟೀಲ ಅವರು ಕೈಗೊಂಡಿದ್ದ ನೀರಾವರಿ ಯೋಜನೆಯಿಂದಾಗಿ ಮಳೆಯಾಶ್ರಿತ ಬೆಳೆಗಳನ್ನು ಬೆಳೆಯಲು ಕಷ್ಟ ಪಡುತ್ತಿದ್ದ ರೈತರು ಇಂದು ನೀರಾವರಿ ಬೆಳೆಯಾದ ಕಬ್ಬು ಬೆಳೆಯುವ ಮೂಲಕ ಆರ್ಥಿಕವಾಗಿ ಸ್ವಾವಲಂಬಿಯಾಗುತ್ತಿದ್ದಾರೆ ಎಂದು ಅವರು ಹೇಳಿದರು.
ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ಮುಖಂಡರಾದ ಬಿ.ಜಿ. ಪಾಟೀಲ, ರಾಮು ರಾಠೋಡ, ಸದಾಶಿವ ಪೂಜಾರಿ, ಚನ್ನಪ್ಪ ವಾರದ, ರಾಜು ರಾಠೋಡ, ಎಸ್.ಆರ್. ನಾಯಕ, ಕಿರಣ ನಾಯಕ, ಶ್ರೀಧರ ಹೆಗಡೆ, ಗೋವಿಂದ ಶಿಂಧೆ, ನಟರಾಜ ಪತ್ತಾರ, ಹುನ್ನು ಬಾಬು ನಾಯಕ, ಕವಿತಾ ಸುಭಾಷ ರಜಪೂತ, ಸುಭಾಷ ರಜಪೂತ, ಸತೀಶ ನಾಯಕ, ಧನರಾಜ ಪತ್ತಾರ, ಆರ್.ಬಿ. ನಾಯಕ, ಮೋತಿಲಾಲ ನಾಯಕ, ಸತೀಶ ನಾಯಕ, ಅಶೋಕ ನಾಯಕ ಮತ್ತಿತರರಿದ್ದರು.