ಹೆಚ್ಚಿನ ಬೆಲೆಗೆ ಔಷಧ ಮಾರಾಟ ಮಾಡದರೆ ಕ್ರಮ: ಕೊಟ್ಟೂರು ತಹಸೀಲ್ದಾರ್ ಅನಿಲ್‌ಕುಮಾರ್ ಎಚ್ಚರಿಕೆ

Kotturu Tahasildar Meeting with Dectors
ಕೊಟ್ಟೂರಿನ ತಹಸಿಲ್ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ವೈದ್ಯರು ಮತ್ತು ಔಷಧ ಅಂಗಡಿ ಮಾರಾಟಗಾರರ ಸಭೆಯಲ್ಲಿ ತಹಸೀಲ್ದಾರ್ ಜಿ.ಅನಿಲ್ ಕುಮಾರ್, ಪಪಂ ಮುಖ್ಯಾಧಿಕಾರಿ ಟಿ.ಎಸ್.ಗಿರೀಶ್, ವೈದ್ಯೆ ಸುಲೋಚನಾ ಇತರರಿದ್ದರು.
Published on

ಕೊಟ್ಟೂರು: ಔಷಧ ಅಂಗಡಿ ಮಾಲೀಕರು ನಿಗದಿತ ಬೆಲೆಗೆ ಔಷಧ ಮಾರಬೇಕು. ಹೆಚ್ಚಿನ ದರಕ್ಕೆ ಮಾರಾಟ ಮಾಡಿದ ದೂರುಗಳು ಬಂದಲ್ಲಿ ಜಿಲ್ಲಾ ಔಷಧ ನಿಯಂತ್ರಣ ಇಲಾಖೆ ಮೂಲಕ ಕ್ರಮಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ಜಿ.ಅನಿಲ್ ಕುಮಾರ್ ಹೇಳಿದರು.

ಪಟ್ಟಣದ ತಹಸಿಲ್ ಕಚೇರಿಯ ಮಹಾತ್ಮಗಾಂಧಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಔಷಧ ಅಂಗಡಿ ಮಾಲೀಕರು ಮತ್ತು ವೈದ್ಯರ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಔಷಧ ಅಂಗಡಿ ಮಾಲೀಕರು ಮಾಸ್ಕ್‌ಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಬಾರದು. ವೈದ್ಯರ ಚೀಟಿ ಇಲ್ಲದೆ ಔಷಧ ನೀಡಬಾರದು ಎಂದು ಎಚ್ಚರಿಕೆ ನೀಡಿದರು. ಔಷಧ ಮಾರಾಟಗಾರರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮಾತನಾಡಿ, ತ್ರಿಲೇಯರ್ ಮಾಸ್ಕ್‌ಗಳನ್ನು ಮಾತ್ರ ಕನಿಷ್ಠ ಬೆಲೆಗೆ ಮಾರಾಟ ಮಾಡುವುದಾಗಿ ಭರವಸೆ ನೀಡಿದರು.

ನಕಲಿ ವೈದ್ಯರ ಬಗ್ಗೆ ನಿಗಾ ಇಟ್ಟಿದ್ದು, ಅಂತಹವರು ಕಂಡು ಬಂದಲ್ಲಿ ಇಲ್ಲಿನ ಸಹಾಯವಾಣಿ(08391-225400)ಗೆ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು. ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ತಿಳಿಸಿದರು.

ಸರ್ಕಾರಿ ಆಸ್ಪತ್ರೆ ವೈದ್ಯೆ ಸುಲೋಚನಾಬಾಯಿ ಮಾತನಾಡಿ, ಔಷಧ ಅಂಗಡಿ ಮಾಲೀಕರು ಮತ್ತು ಸಿಬ್ಬಂದಿ ಕರೊನಾ ವಾರಿಯರ್ಸ್‌ ಇದ್ದಂತೆ. ಆದ್ದರಿಂದ ನೀವೂ ಕರೊನಾ ಲಸಿಕೆ ಪಡೆಯಬೇಕು. ಸಿಬ್ಬಂದಿ ಮಾಹಿತಿ ನೀಡಿದರೆ ವ್ಯಾಕ್ಸಿನ್ ನೀಡಲು ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು. ಪಪಂ ಮುಖ್ಯಾಧಿಕಾರಿ ಟಿ.ಎಸ್.ಗಿರೀಶ್, ವೈದ್ಯರ ಸಂಘದ ಅಧ್ಯಕ್ಷ ಡಾ.ಮೂಗಪ್ಪ, ಡಾ.ಸುಷ್ಮಾ, ಔಷಧ ಅಂಗಡಿಗಳ ಮಾಲೀಕರು, ವೈದ್ಯರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net