ಕಠಿಣ ಶ್ರಮದಿಂದ ಸಿಗಲಿದೆ ಉನ್ನತ ಹುದ್ದೆ

28 vikram 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಮಕ್ಕಳು ಕಠಿಣ ಪರಿಶ್ರಮದೊಂದಿಗೆ ಅಭ್ಯಾಸ ಮಾಡಿದಲ್ಲಿ ಉನ್ನತ ಹುದ್ದೆ ಅಲಂಕರಿಸಬಹುದು ಎಂದು ಹು-ಧಾ ವಲಯ ಕಚೇರಿ ಸಹಾಯಕ ಆಯುಕ್ತ ಶಂಕರ ಪಾಟೀಲ ಹೇಳಿದರು.

ನಗರದ ಬಾಸೆಲ್​ ಮಿಷನ್​ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ ಪಾಲಕರ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಶಾಲೆ-ಕಾಲೇಜು ಅವಧಿಯಲ್ಲಿ ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಅಭ್ಯಾಸದತ್ತ ಗಮನ ಹರಿಸಬೇಕು. ಶಿಕ್ಷಕರಿಗೆ, ತಂದೆ, ತಾಯಿಗೆ ಗೌರವ ನೀಡಬೇಕು. ಒಳ್ಳೆ ಪ್ರಜೆಗಳಾಗಿ ಜೀವನ ಸಾಗಿಸಬೇಕು ಎಂದರು.

ಎಸ್​.ಡಿ. ಬೇಲಿ, ವಿಲ್ಸನ್​ ಮೈಲಿ ಮಾತನಾಡಿ, ಮಗುವಿನ ಶಿಕ್ಷಣಕ್ಕೆ ಶಾಲೆ ಜತೆಗೆ ಪಾಲಕರ ಸಹಕಾರವೂ ಅಗತ್ಯವಾಗಿದೆ. ಮಕ್ಕಳ ಚಟುವಟಿಕೆಗಳ ಮೇಲೆ ಸದಾ ಗಮನವಿಡಬೇಕು ಎಂದರು.

ರೆ. ಸ್ಯಾಮುವೆಲ್​ ಕೆಲ್ವಿನ್​ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸುಧಾರಾಣೆ ಸಮಿತಿ ಸದಸ್ಯ ಪುನೀತ, ಜೈಚಂದ್ರ, ಶೈಲೇಶ, ಪಾಲಕರು, ಶಿಕ್ಷಕರು, ಇತರರು ಇದ್ದರು. ಮುಖ್ಯಾಧ್ಯಾಪಕ ಜಾಯ್​ ಪ್ರಕಾಶ ವರದಿ ವಾಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net