ಬಿಎಸ್​ವೈ ಮೊಮ್ಮಗಳ ಆತ್ಮಹತ್ಯೆ: ನಾಳೆ ಹೈಗ್ರೌಂಡ್ಸ್ ಪೊಲೀಸರಿಂದ ಸ್ಥಳ ಮಹಜರು

BSY Soundarya 4
Published on

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೊಮ್ಮಗಳು ಡಾ.ಸೌಂದರ್ಯ ಅವರ ಅಂತಿಮ ಸಂಸ್ಕಾರಕ್ಕೆ ಇಂದು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸೌಂದರ್ಯ ಪತಿ ಡಾ.ನೀರಜ್ ಅವರಿಗೆ ಸೇರಿರುವ ಅಬ್ಬಿಗೆರೆಯ ಫಾರ್ಮ್​ಹೌಸ್​ನಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.

ಮಾಜಿ ಸಿಎಂ ಯಡಿಯೂರಪ್ಪ ಅವರ ಪುತ್ರಿ ಪದ್ಮಾವತಿ ಅವರ ಪುತ್ರಿ ಡಾ.ಸೌಂದರ್ಯ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ವೈದ್ಯೆಯಾಗಿದ್ದು, ಕ್ರೆಸೆಂಟ್ ರಸ್ತೆಯ ಅಪಾರ್ಟ್​ಮೆಂಟ್​ನಲ್ಲಿ ನೆಲೆಸಿದ್ದರು. ಇಂದು ಅವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಚಿಕ್ಕಮಗುವೊಂದನ್ನು ಬೇರೆ ರೂಮ್​ನಲ್ಲಿ ಬಿಟ್ಟು ವೇಲ್ ಮೂಲಕ ನೇಣು ಹಾಕಿಕೊಂಡು ಅವರು ಸಾವಿಗೆ ಶರಣಾಗಿದ್ದರು. ಹೈಗ್ರೌಂಡ್ಸ್​ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿತ್ತು.

ಘಟನೆ ಬಳಿಕ ಡಾ.ಸೌಂದರ್ಯ ಅವರನ್ನು ನೇಣು ಬಿಗಿದುಕೊಂಡಿದ್ದ ವೇಲ್ ಸಮೇತ ಮಲ್ಲಿಗೆ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ವೈದ್ಯರು ಸೌಂದರ್ಯರ ಸಾವನ್ನು ದೃಢಪಡಿಸಿದ್ದರ ಹಿನ್ನೆಲೆಯಲ್ಲಿ ಪತಿ ಹೈಗ್ರೌಂಡ್ಸ್​ ಪೊಲೀಸರಿಗೆ ಮಾಹಿತಿ ನೀಡಿದ್ದರು. ಹೀಗಾಗಿ ಅಲ್ಲಿಗೆ ಆಗಮಿಸಿದ ಪೊಲೀಸರು ವೇಲ್​ ತಮ್ಮ ವಶಕ್ಕೆ ಪಡೆದಿದ್ದು, ನಾಳೆ ಸ್ಥಳ ಮಹಜರು ನಡೆಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net