

ಯಲಬುರ್ಗಾ: ಸೃಜನಶೀಲ ಚಟುವಟಿಕೆ, ಸಮಾಜಮುಖಿ ಕೆಲಸ ಮಾಡುತ್ತಿರುವುದು ಸೇವಾ ಗುರುಬಳಗದ ಕಾರ್ಯ ಶ್ಲಾಘನೀಯ ಎಂದು ನಿವೃತ್ತ ಮುಖ್ಯಶಿಕ್ಷಕ ವೈ.ಬಿ.ಮೇಟಿ ಹೇಳಿದರು.
ತಾಲೂಕಿನ ಬಳೂಟಗಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಎನ್‌ಎಂಎಂಎಸ್ ಪರೀಕ್ಷೆಗೆ ಉಚಿತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಎನ್‌ಎಂಎಂಎಸ್ ಪರೀಕ್ಷೆಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ಹಮ್ಮಿಕೊಂಡಿರುವುದು ಸಂತಸದ ವಿಷಯವಾಗಿದೆ. ತರಬೇತಿ ಸದುಪಯೋಗಪಡಿಸಿಕೊಂಡು ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ನಾಲ್ಕು ವರ್ಷಗಳ ಕಾಲ ವಿದ್ಯಾರ್ಥಿ ವೇತನ ಪಡೆಯಬೇಕು ಎಂದರು.
ಉಪನ್ಯಾಸಕ ದೊಡ್ಡಬಸಪ್ಪ, ಬಳಗದ ಮುಖ್ಯಸ್ಥ ಸಿದ್ದಲಿಂಗಪ್ಪ ಶ್ಯಾಗೋಟಿ, ಸಮೂಹ ಸಂಪನ್ಮೂಲ ವ್ಯಕ್ತಿ ನಾಗರಾಜ ಕುರಿ, ಶಿಕ್ಷಕರ ಸಂಘದ ತಾಲೂಕು ಸಹ ಕಾರ್ಯದರ್ಶಿ ಮೆಹಬೂಬ್ ಮಾತನಾಡಿದರು. ಎಸ್ಡಿಎಂಸಿ ಅಧ್ಯಕ್ಷ ಏಕಪ್ಪ ಕೊನವಾಲದ, ಮುಖ್ಯಶಿಕ್ಷಕ ಶಿವಶಂಕ್ರಪ್ಪ ಕೆಂಪಣ್ಣವರ, ಶಿಕ್ಷಕರಾದ ಗಂಗಮ್ಮ ಸೊಬಗಿನ, ನಾಗಪ್ಪ ಬೆಟಗೇರಿ, ಪರಸಪ್ಪ ಬಿಳೇಕಲ್, ಸುಮಂಗಲಾ ತೊಂಡಿಹಾಳ, ದ್ಯಾಮನಗೌಡ್ರ, ಮರ್ತುಜಾಸಾಬ್ ಮುಜಾವರ, ಕಲ್ಲೇಶ ಹಿರೇಮಠ, ಅನಿಲ್ ಮೇಟಿ, ಮೆಹಬೂಬ್ ಹೊಸಮನಿ ಇತರರಿದ್ದರು.