ಕಲಾಪದಿಂದ ದೂರ ಉಳಿದ ಹೈಕೋರ್ಟ್ ವಕೀಲರು

23 Dwd 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ರಾಜ್ಯದ ನಾಲ್ವರು ಹೈಕೋರ್ಟ್ ನ್ಯಾಯಮೂರ್ತಿಗಳನ್ನು ಬೇರೆ ರಾಜ್ಯಗಳಿಗೆ ವರ್ಗಾವಣೆಗೆ ಶಿಫಾರಸು ಮಾಡುವ ಸುಪ್ರೀಂ ಕೋರ್ಟ್ ಕೊಲಿಜಿಯಂನ ನಿರ್ಧಾರವನ್ನು ಖಂಡಿಸಿ ಹೈಕೋರ್ಟ್ ವಕೀಲರ ಸಂಘದಿ0ದ ಬುಧವಾರ ಪ್ರತಿಭಟಿಸಲಾಯಿತು.

ಧಾರವಾಡ ಹೈಕೋರ್ಟ್ ಪೀಠದ ಸಭಾಂಗಣದಲ್ಲಿ ಸಂಘದ ಪದಾಧಿಕಾರಿಗಳು, ಸದಸ್ಯರು ಸಭೆ ಸೇರಿ ಹೋರಾಟ ಮುಂದುವರಿಸಲು ಸರ್ವಾನುಮತದಿಂದ ನಿರ್ಧರಿಸಿದರು. ನಂತರ ಕೋರ್ಟ್ ಕಲಾಪಗಳಿಂದ ದೂರ ಉಳಿದು ಹೈಕೋರ್ಟ್ ಮುಖ್ಯದ್ವಾರದವರೆಗೆ ತೆರಳಿ ಪ್ರತಿಭಟಿಸಿದರು. ವರ್ಗಾವಣೆ ಶಿಫಾರಸನ್ನು ಹಿಂಪಡೆಯುವವರೆಗೆ ಹೋರಾಟ ಮುಂದುವರಿಸುವುದಾಗಿ ವಕೀಲರು ಪ್ರಕಟಿಸಿದರು.

ವಕೀಲರ ಸಂಘದ ಅಧ್ಯಕ್ಷ ವಿ.ಎಂ. ಶೀಲವಂತ, ಮಾಜಿ ಅಧ್ಯಕ್ಷ ಬಿ.ಡಿ. ಹಿರೇಮಠ, ಉಪಾಧ್ಯಕ್ಷ ಸಂತೋಷ ಮಲಗೌಡರ, ಪ್ರಧಾನ ಕಾರ್ಯದರ್ಶಿ ಆನಂದ ಕೊಳ್ಳಿ, ಸಹ ಕಾರ್ಯದರ್ಶಿ ಶಿವರಾಜ ಬೆಳ್ಳಕ್ಕಿ, ಖಜಾಂಚಿ ವಿಜಯ ಚಿನಿವಾರ, ಪದಾಽಕಾರಿಗಳಾದ ಕೆ.ಎಸ್. ಕೋರಿಶೆಟ್ಟರ, ಮಹಾಂತೇಶ ಹಿರೇಮಠ, ಮನೋಜ ಬಿಕ್ಕಣ್ಣವರ, ಗಾಯತ್ರಿ ಎಸ್.ಆರ್., ವಿದ್ಯಾವತಿ ಕೊಟ್ಟೂರಶೆಟ್ಟರ, ಎಸ್.ಎಸ್. ಎಡ್ರಾಮಿ, ಜಗದೀಶ ಪಾಟೀಲ, ದಿನೇಶ ಕುಲಕರ್ಣಿ, ಸಿದ್ಧಲಿಂಗಸ್ವಾಮಿ ಬೇತೂರಮಠ, ಶರ್ಮಿಳಾ ಪಾಟೀಲ, ಸುನೀಲ ದೇಸಾಯಿ, ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net