ರಾಯರ ಮಠದಲ್ಲಿ ಹೈ ಆಲರ್ಟ್

mantralaya
mantralaya
Published on

ರಾಯಚೂರು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ಹಿನ್ನಲೆಯಲ್ಲಿ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆಂಧ್ರ ಪ್ರದೇಶ ಪೊಲೀಸರು ಹೈ ಅಲರ್ಟ್ ಆಗಿz್ದÁರೆ.

ಮಾಧವರಂ ಹಾಗೂ ಮಂತ್ರಾಲಯದ ಪೊಲೀಸರು ಭಾನುವಾರ ರಾತ್ರಿಯಿಂದ ಮುನ್ನೆಚ್ಚರಿಕೆಯಾಗಿ ಹಾಗೂ ಜÁಗೃತಿ ಮೂಡಿಸಲು ಮಂತ್ರಾಲಯದಲ್ಲಿ ತೀವ್ರ ತಪಾಸಣೆ ನಡೆಸಿದರು. ಶ್ವಾನದಳದ ಸಹಾಯದಿಂದ ಶ್ರೀಮಠದ ಪ್ರಾರಂಗಣ, ಭೋಜನ ಶಾಲೆ, ತುಂಗಭದ್ರಾ ನದಿ ತೀರ, ಬಸ್ ನಿಲ್ದಾಣ, ವ್ಯಾಪಾರಿ ಮಳಿಗೆಗಳು, ವಸತಿ ಗೃಹಗಳು, ಬರುವ ಬಸ್ , ಕಾರುಗಳಲ್ಲಿ ಶೋಧ ನಡೆಸಿದರು. ಭಕ್ತರ ಬ್ಯಾಗ್‌ಗಳನ್ನ ಸಹ ತಪಾಸಣೆ ಮಾಡಲಾಯಿತು.

ಶ್ರೀಮಠಕ್ಕೆ ಸಾವಿರಾರು ಭಕ್ತರು ಬರುವ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ತಪಾಸಣೆ ಮೂಲಕ ಸ್ಥಳೀಯರಲ್ಲಿ ಜÁಗೃತಿ ಮೂಡಿಸಿz್ದÁರೆ. ಭದ್ರತೆ ಬಿಗಿಗೊಳಿಸಲು ಮಂತ್ರಾಲಯ ಮಠದ ಆಡಳಿತ ಮಂಡಳಿಗೆ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net