ಕಠಿಣ ಪರಿಶ್ರಮದಿಂದ ಉನ್ನತ ಸಾಧನೆ ಸಾಧ್ಯ

SSLC STUDENT
Published on

ಸವಣೂರ: ಸ್ಪರ್ಧಾತ್ಮಕ ಕ್ಷೇತ್ರವಾಗಿರುವ ಶಿಕ್ಷಣ ರಂಗದಲ್ಲಿ ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ನಿರಂತರವಾಗಿ ಅಭ್ಯಾಸ ಮುಂದುವರಿಸಿದಲ್ಲಿ ಮಾತ್ರ ಉನ್ನತ ಸಾಧನೆ ಸಾಧ್ಯವಾಗಲಿದೆ ಎಂದು ಜೆಸಿಐ ನಮ್ಮ ಸವಣೂರು ಘಟಕದ ಸಂಸ್ಥಾಪಕ ಅಧ್ಯಕ್ಷ ಯೋಗೇಂದ್ರ ಜಂಬಗಿ ತಿಳಿಸಿದರು.

ಪಟ್ಟಣದ ಹಾವಣಗಿ ಪ್ಲಾಟ್​ನಲ್ಲಿರುವ ಜೆಸಿಐ ಕಚೇರಿ ಸಭಾ ಭವನದಲ್ಲಿ ಗುರುವಾರ ಜೆಸಿಐ ನಮ್ಮ ಸವಣೂರು ಘಟಕದ ವತಿಯಿಂದ ಏರ್ಪಡಿಸಿದ್ದ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಪಡೆದು ಸಾಧನೆಗೈದ ಜೆಸಿಐ ಪದಾಧಿಕಾರಿಗಳ ಮಕ್ಕಳ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತರಬೇತುದಾರ ವಿದ್ಯಾಧರ ಕುತನಿ ಮಾತನಾಡಿ, ಜೆಸಿಐ ನಮ್ಮ ಸವಣೂರು ತಾಲೂಕಿನ 9 ಕ್ಲಸ್ಟರ್ ವ್ಯಾಪ್ತಿಯ ಪ್ರೌಢಶಾಲೆಯ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳಿಗಾಗಿ ವಿಶೇಷ ತರಬೇತಿ ಏರ್ಪಡಿಸಿತ್ತು. ನಿರಂತರ ತರಬೇತಿಯಿಂದ ತಾಲೂಕು 2ನೇ ಸ್ಥಾನವನ್ನು ಕಾಯ್ದುಕೊಳ್ಳಲು ನೆರವಾಗಿದೆ ಎಂದರು.

ಜೆಸಿಐ ನಮ್ಮ ಸವಣೂರು ಘಟಕದ ಅಧ್ಯಕ್ಷೆ ತೇಜಸ್ವಿನಿ ಕೊಂಡಿ ಅಧ್ಯಕ್ಷತೆ ವಹಿಸಿದ್ದರು. ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ಈಶ್ವರ ಪರಶುರಾಮ ಹೊಳಲ ಹಾಗೂ ಸಹನಾ ಶ್ರೀಪಾದಗೌಡ ಪಾಟೀಲ ಅವರಿಗೆ ಸನ್ಮಾನ ಮಾಡಲಾಯಿತು.

ಪದಾಧಿಕಾರಿಗಳಾದ ರಮೇಶ ಅರಗೋಳ, ಬಸವರಾಜ ಚಳ್ಳಾಳ, ಡಾ. ಪರಶುರಾಮ ಹೊಳಲ, ಮಧುಕರ ಜಾಲಿಹಾಳ, ಅಶೋಕ ಕಾಳಶೆಟ್ಟಿ, ವೀಣಾ ಎ., ಕೃಷ್ಣ ಭೋವಿ, ಸೋನಿಯಾ ಮೇಟಿ, ವಾಣಿ ರಾಥೋಡ ಹಾಗೂ ಇತರರು ಪಾಲ್ಗೊಂಡಿದ್ದರು. ಆನಂದ ಮತ್ತಿಗಟ್ಟಿ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net