ಮುಧೋಳ ತಲುಪಿದ ಹಿಡಕಲ್ ಜಲಾಶಯ ನೀರು

Hidkal reservoir water reaches Mudhol
Hidkal reservoir water reaches Mudhol
Published on

ಮುಧೋಳ: ಹಿಡಕಲ್ ಜಲಾಶಯದಿಂದ ಘಟಪ್ರಭಾ ಎಡದಂಡೆ ಕಾಲುವೆಯ ಮೂಲಕ ಹರಿಬಿಟ್ಟಿರುವ ನೀರು ನಗರದ ಕೆರೆಗಳಿಗೆ ಬಂದು ತಲುಪಿದೆ. ಕಳೆದ ಹದಿನೈದು ದಿನಗಳಿಂದ ನಗರದಲ್ಲಿ ಕುಡಿಯುವ ನೀರಿಗೆ ತೊಂದರೆಯಾಗಿದ್ದು, ಈಗ ಹರಿಬಿಟ್ಟಿರುವ ನೀರು ವೆಂಕಟೇಶ ಕೆರೆ, ಅಗಸರ ಕೆರೆ ಹಾಗೂ ದತ್ತಾತ್ರೆಯ ಕೆರೆಗೆ ಬಂದು ತಲುಪಿರುವುದರಿಂದ ನೀರು ಪೂರೈಕೆಗೆ ಅನುಕೂಲವಾಗಲಿದೆ.

ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಮೇ 14 ರಿಂದ ಹಿಡಕಲ್ ಜಲಾಶಯದಿಂದ ಘಟಪ್ರಭಾ ಎಡದಂಡೆ ಕಾಲುವೆಯ ಮೂಲಕ ನೀರು ಹರಿಸುವ ಕುರಿತು ಮಾಹಿತಿ ನೀಡಿದ್ದರು. ಸದ್ಯ ಚಿಮ್ಮಡದ ಕಾಲುವೆಯಿಂದ ಶಿರೋಳ, ಮಾಲಾಪೂರ ಮೂಲಕ ನಗರದ ಕೆರೆಗಳಿಗೆ ಬಂದು ಸೇರುತ್ತಿದೆ.

ಮುಂಗಾರು ಪೂರ್ವದಲ್ಲಿ ತಾಲೂಕಿನಲ್ಲಿ ಒಂದೇ ದಿನ ಮಳೆಯಾಗಿದ್ದು, ಬೇಸಿಗೆಯ ಸ್ಥಿತಿಯೇ ಮುಂದುವರಿದಿದೆ. ಸದ್ಯ ಕೆರೆಗೆ ನೀರು ಬಂದು ತುಂಬುತ್ತಿರುವುದರಿಂದ ನಗರದ ನೂರಾರು ಬೋರ್‌ವೆಲ್‌ಗಳ ಅಂತರ್ಜಲಮಟ್ಟ ಸುಧಾರಣೆ ಕಾಣಲಿದೆ. ಕೆರೆಗೆ ನೀರು ಬಂದು ಸೇರುತ್ತಿರುವ ಸ್ಥಳಕ್ಕೆ ನಗರಸಭೆ ಆಯುಕ್ತ ಗೋಪಾಲ ಕಾಸೆ, ಅಭಿಯಂತರರಾದ ಹೊಸೂರ, ರಾಜು ಚೌಹಾಣ್ ಭೇಟಿ ನೀಡಿ ಪರಿಶೀಲಿಸಿದರು.

ಪೊಲೀಸ್ ಬಂದೋಬಸ್ತ್ ನಡುವೆ ಕಾಲುವೆಗೆ ನೀರು ಹರಿಯುತ್ತಿದೆ ಎಂದು ಜಿಎಲ್‌ಬಿಸಿ ಅಧಿಕಾರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net