

ಸಿಂಧನೂರು; ಎಲ್ಲೆಂದರಲ್ಲಿ ಹರಡಿದ ಕಸ, ಗೋಡೆಗಳ ತುಂಬ ಗುಟ್ಖಾ ಕಲೆ, ಮೂತ್ರಗೃಹವಾದ ಆವರಣ, ಮರೀಚಿಕೆಯಾದ ಸ್ವಚ್ಛತೆ, ಛೀಮಾರಿ ಹಾಕುತ್ತಲೇ ಮೂಗುಮುಚ್ಚಿಕೊಂಡು ಓಡಾಡುವ ಪ್ರಯಾಣಿಕರು.
ಇದನ್ನೂ ಓದಿ: ಬಿಡದಿ ರೈಲು ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ!
ಇದು ನಗರದ ಹೈಟೆಕ್ ಬಸ್ ನಿಲ್ದಾಣದ ಚಿತ್ರಣ. ಕಲ್ಯಾಣ ಕರ್ನಾಟಕ ಭಾಗದ ಅಧಿಕ ಬಸ್‌ಗಳು ನಿತ್ಯ ಬಂದು ಹೋಗುತ್ತವೆ. ಸಾವಿರಾರು ಪ್ರಯಾಣಿಕರು ಸಂಚರಿಸುತ್ತಾರೆ. ನಿಲ್ದಾಣದ ಯಾವ ಕಡೆಗೆ ನೋಡಿದರೂ ಗುಟ್ಖಾ ಉಗುಳಿದ ಕಲೆಗಳು ಎದ್ದು ಕಾಣುತ್ತವೆ. ಪ್ರಯಾಣಿಕರು ನಿಲ್ಲಲು, ಕುಳಿತುಕೊಳ್ಳಲು ಯೋಚಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ವ್ಯವಸ್ಥಾಪಕರು, ಕಂಟ್ರೊಲರ್ ನೋಡುತ್ತಾರೋ ಇಲ್ಲವೋ ಎಂಬ ಅನುಮಾನ ಮೂಡಿದೆ.
ಸಾವಿರಾರು ಪ್ರಯಾಣಿಕರು, ವಿದ್ಯಾರ್ಥಿಗಳು ಆಗಮಿಸುವ ನಿಲ್ದಾಣದಲ್ಲಿ ಸೌಲಭ್ಯಕ್ಕಿಂತ ಅವ್ಯವಸ್ಥೆಯೇ ಗೋಚರವಾಗುತ್ತದೆ.
ಒಂದು ಭಾಗದಲ್ಲಿ ಬಸ್ ನಿಲ್ದಾಣಕ್ಕೆ ಸಂಪೂರ್ಣ ಕಾಂಪೌಂಡ್ ನಿರ್ಮಿಸಿರುವುದರಿಂದ ಎಲ್ಲೆಂದರಲ್ಲಿ ವಾಹನ ನಿಲ್ಲಿಸುವುದು, ಕಸ ಹಾಕುವುದು ಸಾಮಾನ್ಯವಾಗಿದೆ. ಮಲ, ಮೂತ್ರ ವಿಸರ್ಜನೆಗೆ ಶೌಚಗೃಹ ಇದ್ದರೂ,
ಬಯಲಲ್ಲೇ ಮೂತ್ರ ವಿಸರ್ಜನೆ ಮಾಡುತ್ತಿರುವುದು ಮಹಿಳೆಯರನ್ನು ಮುಜುಗರಕ್ಕೆ ಸಿಲುಕಿಸಿದೆ. ನಿಲ್ದಾಣದ ಎಡ-ಬಲ ಭಾಗದ ಹಸಿರು ಬೆಳೆಸುವ ಆಶಯ ಬುಡಮೇಲಾಗಿರುವುದು ವಿಪರ್ಯಾಸವೇ ಸರಿ. ಗೋಡೆಗಳಿಗೆಲ್ಲ ಕೆಂಪು: ಬಸ್ ನಿಲ್ದಾಣದ ಪ್ರವೇಶವಾಗುತ್ತಿದ್ದಂತೆ ಕಣ್ಣಿಗೆ ರಾಚುವ ಗುಟ್ಖಾ ಕಲೆ ಎಲ್ಲರಿಗೂ ವಾಕರಿಕೆ ತರಿಸುತ್ತದೆ. ನಿಲ್ದಾಣದಲ್ಲಿ ಆಗಾಗ ಸುಣ್ಣಬಣ್ಣ ಹಚ್ಚಿ ಸ್ವಚ್ಛತೆ ಮಾಡುವ ಅಧಿಕಾರಿಗಳು, ನಂತರದಲ್ಲಿ ಅತ್ತ ಗಮನಹರಿಸುವುದು ಕಡಿಮೆ. ನಿಲ್ದಾಣದ ಛಾವಣಿಯಲ್ಲಿ ಜೀಡಿ ತುಂಬಿದೆ. ಪಾಸ್ ಕೌಂಟರ್‌ನಿಂದ ಹಿಡಿದು ಮಹಿಳೆಯರ ವಿಶ್ರಾಂತಿ ಕೊಠಡಿವರೆಗೂ ಅವ್ಯವಸ್ಥೆಯಿಂದ ಕೂಡಿದೆ.
ಸಾರಿಗೆ ಘಟಕ ವ್ಯವಸ್ಥಾಪಕ, ಸಿಂಧನೂರುಹೊನ್ನಪ್ಪಹೊಸದಾಗಿ ಬಂದಿರುವೆ. ಈಗಾಗಲೇ ಬಸ್ ನಿಲ್ದಾಣದಲ್ಲಿ ನೀರು ಹಾಕಿ ಸ್ವಚ್ಛಗೊಳಿಸಲಾಗಿದೆ. ಆದರೂ, ಮತ್ತೆ ಗುಟ್ಖಾ ಉಗುಳಿ ಅಂದಗೆಡಿಸಿದ್ದಾರೆ. ನಿಲ್ದಾಣ ಆವರಣದಲ್ಲಿ ಜನರು ಮೂತ್ರ ಮಾಡುತ್ತಾರೆ. ಹೇಳಿ ಹೇಳಿ ಸಾಕಾಗಿ ಹೋಗಿದೆ.
ಪದವಿ ವಿದ್ಯಾರ್ಥಿ, ಸಿಂಧನೂರು
ಶಿವಮಣಿ ಶಾಲಿಗೆನೂರು
ಸಿಂಧನೂರು ಬಸ್ ನಿಲ್ದಾಣ ಹೆಸರಿಗೆ ಮಾತ್ರ ಹೈಟೆಕ್. ಇಲ್ಲಿ ಸೌಲಭ್ಯಗಳೇ ಇಲ್ಲ. ಗುಟ್ಖಾ ತಿಂದು ಗೋಡೆಗಳಿಗೆ ಉಗಿದಿರುವುದು ನೋಡಿದರೆ ಬೇಸರವಾಗುತ್ತದೆ. ನಿತ್ಯ ಪ್ರಯಾಣಿಕರು, ಶಾಲಾ-ಕಾಲೇಜ್ ವಿದ್ಯಾರ್ಥಿಗಳು ಬಂದು ಹೋಗುತ್ತಾರೆ. ಈ ಕುರಿತು ಅಧಿಕಾರಿಗಳು ಸೂಕ್ತ ಕ್ರಮವಾಗಬೇಕು.