ಗೋಹತ್ಯೆ ತಡೆಗೆ ಹಿಂಜಾವೇ ಮನವಿ

3-HNL-2
Published on

ಹಾನಗಲ್ಲ: ಬಕ್ರೀದ್ ಹಬ್ಬದಂದು (ಜೂ.7) ತಾಲೂಕಿನಲ್ಲಿ ಗೋಹತ್ಯೆ ನಡೆಯದಂತೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹಿಂದು ಜಾಗರಣ ವೇದಿಕೆ ಸದಸ್ಯರು ಸಿಪಿಐ ಎನ್.ಎಚ್. ಆಂಜನೇಯ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಅಕ್ಕಿಆಲೂರು, ಹಾನಗಲ್ಲ, ನರೇಗಲ್ ಸೇರಿದಂತೆ ತಾಲೂಕಿನಾದ್ಯಂತ ಗೋ ಹತ್ಯೆ ನಡೆಸುವುದಕ್ಕಾಗಿ ನೂರಾರು ಗೋವುಗಳನ್ನು ತರಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಅಧಿಕಾರಿಗಳು ಗೋವುಗಳನ್ನು ಕಟ್ಟಿರುವ ಮನೆಗಳಲ್ಲಿ ಪರವಾನಗಿ ಬಗ್ಗೆ ಪರಿಶೀಲಿಸಬೇಕು. ಗೋ ಸಾಗಾಟವಾಗುವ ಪ್ರಮುಖ ರಸ್ತೆಗಳಲ್ಲಿ ಚೆಕ್‌ಪೋಸ್ಟ್ ನಿರ್ಮಿಸಬೇಕು. ಅಕ್ರಮ ಗೋ ಸಾಗಣೆ ಹೆಚ್ಚಾಗಿದ್ದು, ಇವುಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.

ವೇದಿಕೆಯ ತಾಲೂಕು ಸಂಯೋಜಕ ಲಿಖಿತ ಹದಳಗಿ, ಸಹ ಸಂಯೋಜಕ ಸಂತೋಷ ಅಜಗುಂಡಿ, ಹರೀಶ ಹಾನಗಲ್ಲ, ಬಸವರಾಜ ಹಾದಿಮನಿ, ಕೃಷ್ಣಾ ಕೊರಚರ, ಭರತ ಹುಳ್ಳಿಕಾಶಿ, ಬಸವರಾಜ ಮಟ್ಟಿಮನಿ, ಶಿವು ಮೇದಾರ, ನವೀನ ಹಿರೇಮಠ, ಕುಮಾರಸ್ವಾಮಿ ಹಿರೇಮಠ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net