

ಹುಬ್ಬಳ್ಳಿ : ಮೆದುಳು, ಬೆನ್ನುಹುರಿ, ಎಲುಬá--ಕೀಲು, ತುರ್ತು ಹಾಗೂ ಅಪಘಾತ ಚಿಕಿತ್ಸೆಯಲ್ಲಿ ಸಾಧನೆಗೈದಿರುವ ಹುಬ್ಬಳ್ಳಿಯ ಶ್ರೀ ಬಾಲಾಜಿ ನರರೋಗ ಆಸ್ಪತ್ರೆ ಮತ್ತು ತುರ್ತು ಚಿಕಿತ್ಸಾ ಕೇಂದ್ರವು ಇದೀಗ ಉತ್ಕೃಷ್ಟ ಗುಣಮಟ್ಟದ ಇಂಗ್ಲೆಂಡ್ನ ರಾಷ್ಟ್ರೀಯ ಆರೋಗ್ಯ ಸೇವೆ (ಎನ್ಎಚ್ಎಸ್) ಹಾಗೂ ಬ್ಯಾಪಿಯೋ ಟ್ರೇನಿಂಗ್ ಅಕಾಡೆಮಿ (ಬಿಟಿಎ) ಜತೆ ಮಹತ್ವದ ಒಡಂಬಡಿಕೆ ಮಾಡಿಕೊಂಡಿದೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಶ್ರೀ ಬಾಲಾಜಿ ಆಸ್ಪತ್ರೆಯ ಚೇರ್ಮನ್ ಡಾ. ಕ್ರಾಂತಿ ಕಿರಣ, ಇತ್ತೀಚಿಗೆ ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಲಾಯಿತು ಎಂದರು.
ಇದರನ್ವಯ ಇಂಡೋ ಇಂಗ್ಲೆಂಡ್ ನಡುವೆ ತಜ್ಞ ವೈದ್ಯರ ವಿನಿಮಯ, ಹೊಸ ಸಂಶೋಧನೆ, ವೃತ್ತಿ ನಾವೀನ್ಯತೆಗೆ ಉತ್ತೇಜನ ಮೂಲಕ ವೈದ್ಯಕೀಯ ಪ್ರವಾಸೋದ್ಯಮ ಆರಂಭವಾಗಲಿದೆ ಎಂದು ಹೇಳಿದರು.
ತಜ್ಞರಿಂದ ವೈದ್ಯಕೀಯ ಕ್ಷೇತ್ರದಲ್ಲಿನ ಅವಿಷ್ಕಾರ, ಸಂಶೋಧನೆ, ತಂತ್ರಜ್ಞಾನ ಸೇರಿದಂತೆ ವಿವಿಧ ವಿಷಯ ಕುರಿತ ಉಪನ್ಯಾಸ, ತರಬೇತಿ ಕಾರ್ಯುಗಾರಗಳ ಮೂಲಕ ವೈದ್ಯರು, ಶುಶ್ರೂಷಕರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಗೆ ತುರ್ತು ಚಿಕಿತ್ಸೆ, ನ್ಯೂರೋಸರ್ಜರಿ ಇನ್ನಿತರ ಸಾಮಾನ್ಯ ಶಸ್ತ್ರಚಿಕಿತ್ಸೆಯಲ್ಲಿ ಭಾರತೀಯ ವೈದ್ಯರು, ಶುಶ್ರೂಷಕರಿಗೆ ಕೌಶಲ ಹೆಚ್ಚಿಸುವುದು, ವೃತ್ತಿಪರ ಕ್ಲಿನಿಕಲ್ ಉತೃ್ಕ್ಟತೆ ಮತ್ತು ಪರಸ್ಪರ ಜ್ಞಾನ ವಿನಿಮಯ ಮಾಡಿಕೊಳ್ಳುವುದು ಈ ಒಡಂಬಡಿಕೆಯ ಮುಖ್ಯ ಉದ್ದೇಶವಾಗಿದೆ ಎಂದು ವಿವರಿಸಿದರು.
ಇಂಗ್ಲೆಂಡ್ನ ರಾಷ್ಟ್ರೀಯ ಆರೋಗ್ಯ ಸೇವೆಯ ರಾಷ್ಟ್ರೀಯ ವೈದ್ಯಕೀಯ ನಿರ್ದೇಶಕ ಪ್ರೊ. ಸ್ಟೀಫನ್ ಪೇವಿಸ್, ಬ್ರಿಟಿಷ್ ಅಸೋಸಿಯೇಶನ್ ಆಫ್ ಫಿಜಿಶಿಯನ್ಸ್ ಇಂಡಿಯಾ ಆರಿಜಿನ್ ಟ್ರೇನಿಂಗ್ ಅಕಾಡೆಮಿಯ (ಬಿಟಿಎ) ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ. ಪರಾಗ್ ಸಿಂಘಾಲ್ ಸಮ್ಮುಖದಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಬ್ರಿಟಿಷ್ ಡೆಪ್ಯುಟಿ ಹೈ ಕಮೀಷನರ್ ಅನ್ನಾ ಶಾಟೊ್ಬೕಲ್ಟ್, ಬ್ರಿಟಿಷ್ ಹೈ ಕಮೀಷನರ್ ಹಿರಿಯ ಅಧಿಕಾರಿಗಳಾದ ಎಡ್ನಾ ಡಿಸೋಜಾ, ಜೋಸ್ಟನ್ ಪೆರೆರಾ ಮತ್ತು ಡಾ. ಶಶಾಂಕ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು ಎಂದು ತಿಳಿಸಿದರು.
ಡಾ. ಶಶಾಂಕ್, ಶ್ರೀ ಬಾಲಾಜಿ ಆಸ್ಪತ್ರೆಯ ಸಿಎಒ. ರಿಕಿ ಬೆಂಜಮಿನ್, ಆಡಳಿತಾಧಿಕಾರಿ ಆಶ್ಲೇ ಬೋರಗಾವಿ ಸುದ್ದಿಗೋಷ್ಠಿಯಲ್ಲಿ ಇದ್ದರು.