ಹೆಸ್ಕಾಂ ಕೆಲಸ ಖಾಸಗಿ ವ್ಯಕ್ತಿಗಳಿಗೆ ನಿಷಿದ್ಧ

8..5
ಡಿ.ಎಸ್. ಠಕ್ಕಣ್ಣವರ
Published on

ಸಂಬರಗಿ: ಜಂಬಗಿ ಹೆಸ್ಕಾಂ ವಲಯದಲ್ಲಿ ಬರುವ ಗ್ರಾಮದಲ್ಲಿ ಖಾಸಗಿ ವ್ಯಕ್ತಿಗಳು ವಿದ್ಯುತ್ ಕಂಬದ ಮೇಲೆ ಹತ್ತಿ ಕೆಲಸ ಮಾಡಿದರೆ ನನ್ನ ಗಮನಕ್ಕೆ ತನ್ನಿ. ಅಂತಹವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೆಸ್ಕಾಂ ವಲಯಾಧಿಕಾರಿ ಡಿ.ಎಸ್.ಠಕ್ಕಣ್ಣವರ ಹೇಳಿದರು.

ಜಂಬಗಿ ಹೆಸ್ಕಾಂ ವಲಯ ಕಾರ್ಯಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಗ್ರಾಮಕ್ಕೆ ಒಬ್ಬ ಲೈನ್‌ಮನ್ ನೇಮಕ ಮಾಡಲಾಗಿದೆ. ಖಾಸಗಿ ವ್ಯಕ್ತಿಗಳಿಗೆ ಏನಾದರೂ ಕೆಲಸವಿದ್ದರೆ ಲೈನ್‌ಮನ್ ಸಂರ್ಪರ್ಕಿಸಬೇಕು. ಇಲ್ಲವೇ ನನ್ನನ್ನು ಸಂಪರ್ಕಿಸಬೇಕು.

ಖಾಸಗಿ ವ್ಯಕ್ತಿಗಳು ವಿದ್ಯುತ್ ಕಂಬವೇರಿಸುವುದು ಅಪರಾಧ. ನನ್ನ ಗಮನಕ್ಕೆ ಬಂದರೆ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುತ್ತೇವೆ. ಗ್ರಾಮದಲ್ಲಿ
ಲೈನ್‌ಮನ್ ಶಾಶ್ವತವಾಗಿ ಉಳಿಯಬೇಕು. ಈ ಕುರಿತು ಎಚ್ಚರಿಕೆ ನೋಟಿಸ್ ನೀಡಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net